Karkala: ಸಂಸತ್ತಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಜನರ ಧ್ವನಿಯಾಗಬೇಕು

Karkala: ಸಂಸತ್ತಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಜನರ ಧ್ವನಿಯಾಗಬೇಕು


ಕಾರ್ಕಳ: ಜನರಿಂದ ಚುನಾಯಿಸಲ್ಪಟ್ಟು ಕೇವಲ ಸಂಸತ್ ಸದಸ್ಯನಾದರಷ್ಟೇ ಸಾಲದು. ಆತ ಒಬ್ಬ ಸಮರ್ಥ ಸಂಸದೀಯನಾಗಿ ಸಂಸತ್ತಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯಬಲ್ಲ ಜನರ ಧ್ವನಿಯಾಗಬೇಕು. ಆಗ ಮಾತ್ರ ಸಂಸತ್ ಸದಸ್ಯತ್ವಕ್ಕೆ ಮೌಲ್ಯ ಬರುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ.

ಅವರು ಇಲ್ಲಿನ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡುತ್ತಿದ್ದರು.

ಸಾಧಿಸುವ ಛಲ ಮತ್ತು ಸಾಧನೆಯ ಹಿನ್ನೆಲೆ ಉಳ್ಳವನಿಗೆ ಯಾರದ್ದೋ ಹೆಸರು ಹೇಳಿ ಮತಯಾಚಿಸುವ ಅಗತ್ಯ ಬರುವದಿಲ್ಲ ಎಂದು ಪರೋಕ್ಷ ತನ್ನ ಎದುರಾಳಿಯನ್ನು ಠೀಕಿಸಿದ ಅವರು ಒಬ್ಬ ಸಚಿವನಾಗಿ ಸಂಸದನಾಗಿ ಆ ಅವಧಿಯಲ್ಲಿ ನಾನು ಮಾಡಿದ ಜನಪರ ಕೆಲಸಗಳ ತಳಹದಿಯ ಮೇಲೆ ಹೆಮ್ಮೆಯಿಂದ ನಿಮ್ಮ ಮುಂದೆ ಬಂದಿದ್ದೇನೆ. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎನ್ನುವವರಿಗೆ, ಪಾರ್ಲಿಮೆಂಟಿನಲ್ಲಿಯೇ ಉತ್ತರಿಸಲಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶಕ್ಕೆ ಕಾಂಗ್ರೆಸ್ ಆಡಳಿತದ ಅಗತ್ಯವಿದೆ. ಬಹುಶ ಬಂಡವಾಳಶಾಹಿಗಳ ಸಾಲ ಮನ್ನಾಮಾಡಿ ದೇಶವನ್ನು ಸಾಲದ ಕೂಪಕ್ಕೆ ತಳ್ಳಿ ಚುನಾವಣಾ ಬಾಂಡ್ ಮೂಲಕ ತಮ್ಮ ಪಕ್ಷವನ್ನು ಶ್ರೀಮಂತಗೊಳಸಿಕೊಂಡವರಿಗೆ ಸಂವಿಧಾನದ ಅಗತ್ಯವಿಲ್ಲ ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಪ್ರಸ್ತಾವನೆಗೈದರು. ಹಿಂದುಳಿದ ವರ್ಗದ ಅಧ್ಯಕ್ಷ ಕುಶ ಮೂಲ್ಯ ಸ್ವಾಗತಿಸಿ, ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಕೆಪಿಸಿಸಿ ಸದಸ್ಯ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಶೇಖರ ಮಡಿವಾಳ, ಮಹಿಳಾಧ್ಯಕ್ಷೆ ಅನಿತಾ ಡಿ’ಸೋಜ, ಗ್ರಾಮ ಸಮಿತಿ ಅಧ್ಯಕ್ಷೆ ಜೋಯ್ಸ್ ಟೆಲ್ಲಿಸ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article