Karkala: ತ್ರಿಶಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರ
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಉಡುಪಿಯಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ ಇದರ ನೂತನ ಪ್ರಾಂಶುಪಾಲರಾಗಿ ರಾಮಕೃಷ್ಣ ಹೆಗಡೆ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾಗಿ ಜೋಯಲ್ ಮನೋಜ್ ಫೆರ್ನಾಂಡಿಸ್ ಹಾಗೂ ಆಡಳಿತ ಅಧಿಕಾರಿಗಳಾಗಿ ಜಯಪ್ರಕಾಶ್ ಶೆಟ್ಟಿ ನೇಮಕಗೊಳಿಸಲಾಯಿತು. ಕ್ರಿಯೇಟಿವ್‌ನ ಸಂಸ್ಥಾಪಕರಾದ ಡಾ. ಗಣನಾಥ್ ಶೆಟ್ಟಿ, ಅಶ್ವತ್ ಎಸ್.ಎಲ್. ಮತ್ತು ಅಮೃತ್ ರೈ ಅವರ ಮೂಲಕ ಅಧಿಕಾರ ಹಸ್ತಾಂತರಿಸಿ ಪ್ರಾಂಶುಪಾಲರಾಗಿ ನಿಯಕ್ತಿ ಗೊಂಡಿರುವ ರಾಮಕೃಷ್ಣ ಹೆಗಡೆಯವರ ಅನುಭವ ಸಂಸ್ಥೆಯ ಏಳಿಗೆಯಲ್ಲಿ ಮಹತ್ತರ ಪಾತ್ರ ವಹಿಸಲಿ, ಮತ್ತು ಉಪ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿರುವ ಭೌತಶಾಸ್ತ್ರ ಉಪನ್ಯಾಸಕರೂ ಆಗಿರುವ ಜೋಯಲ್ ಮನೋಜ್ ಫೆರ್ನಾಂಡಿಸ್ ಅವರ ಶೈಕ್ಷಣಿಕ ಅನುಭವದೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ಆಡಳಿತ ಅಧಿಕಾರಿಯಾಗಿ ನೇಮಕವಾಗಿರುವ ಜಯಪ್ರಕಾಶ್ ಶೆಟ್ಟಿ, ಮುಖ್ಯೋಪಾಧ್ಯಾಯರಾಗಿ ಅನೇಕ ವರ್ಷಗಳ ಅನುಭವ ಹೊಂದಿರುವ ಸಮರ್ಥ ವ್ಯಕ್ತಿ, ಅವರ ಮೂಲಕ ಕಾಲೇಜಿನ ಮತ್ತು ವಸತಿ ನಿಲಯಗಳ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಅನುಕೂಲ ಕರವಾಗಿದೆ.
ಈ ಸಂದರ್ಭದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವರ್ಗ, ಪಿಆರ್‌ಓ ಲಿಶಾನ್ ಗೌಡ ಬೋಧಕೇತರ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.