Mangalore: ಲೋಕಸಭಾ ಚುನಾವಣೆ 100ಶೇ ಮತದಾನಕ್ಕೆ ಬದ್ಧರಾಗೋಣ-ಸುರಕ್ಷಿತ ಭಾರತದ ನಿರ್ಮಾಣಕ್ಕಾಗಿ ಮತ ಚಲಾಯಿಸಿ
Wednesday, April 24, 2024
ಮಂಗಳೂರು: ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಎ.26 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಹಿತಾಶಕ್ತಿಯನ್ನು ಕಾಪಾಡುವ ಸರಕಾರ ಬರಲು, ಯೋಚಿಸಿ ನಿರ್ಧರಿಸಿ ಮತ ಹಾಕಿ ಎಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ರಹಿತ ಆಡಳಿತ, ಸಮರ್ಥ ನಾಯಕತ್ವ, ರಾಷ್ಟ್ರೀಯ ಸುರಕ್ಷತೆಗೆ ಒತ್ತು, ಸ್ವಾಭಿಮಾನದ ಬದುಕು, ಸದೃಢ ಆರ್ಥಿಕತೆ, ಎಲ್ಲರೊಂದಿಗೆ ಎಲ್ಲರ ವಿಕಾಸ ಚಿಂತನೆ ಇರುವ ಸರಕಾರ ಬರಬೇಕಾಗಿದೆ. ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ, 370 ವಿಧಿ ರದ್ದು, ಕಾಶಿ ಮಂದಿರ ಕಾರಿಡಾರ್ ನಿರ್ಮಾಣ, ಭಯೋದ್ಫಾದನೆಗೆ ಕಡಿವಾಣ, ವಿಶ್ವ ನಾಯಕನಾಗುವತ್ತ ಭಾರತ, ಯಶಸ್ವಿ ಚಂದ್ರಯಾನ, ಆದಿತ್ಯಯಾನ, ಸೈನಿಕ ಶಕ್ತಿಯ ಆಧುನೀಕರಣ, ಹೊಸ ರಸ್ತೆ ನಿರ್ಮಾಣ ಈ ರೀತಿ ಕಳೆದ 10 ವರ್ಷಗಳಲ್ಲಿ ದೇಶ ಹಲವಾರು ಬದಲಾವಣೆಗಳನ್ನು ಕಂಡಿದೆ.
ಇಂತಹ ಸರಕಾರ ಮತ್ತೊಮ್ಮೆ ಬರುವ ನಿಟ್ಟಿನಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಮತದಾನ ಮಾಡೋಣಾ, ನಮ್ಮೆಲ್ಲ ಬಂಧು ಮಿತ್ರರಿಗೆ, ನೆರೆಹೊರೆಯವರಿಗೆ, ಹಿತೈಷಿಗಳಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸುವ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮತದಾನ ಭಾಂಧವರಲ್ಲಿ ಎಚ್.ಕೆ. ಪುರುಷೋತ್ತಮ ವಿನಂತಿಸಿದ್ದಾರೆ.