Mangalore: ಬಿಜೆಪಿಯಲ್ಲಿ ಬಣ ರಾಜಕೀಯ, ಅಭ್ಯರ್ಥಿಯೊಂದಿಗೆ ಶಾಸಕರೇ ಸಹಕರಿಸುತ್ತಿಲ್ಲ: ಹರೀಶ್ ಕುಮಾರ್

Mangalore: ಬಿಜೆಪಿಯಲ್ಲಿ ಬಣ ರಾಜಕೀಯ, ಅಭ್ಯರ್ಥಿಯೊಂದಿಗೆ ಶಾಸಕರೇ ಸಹಕರಿಸುತ್ತಿಲ್ಲ: ಹರೀಶ್ ಕುಮಾರ್


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಲ್ಲಿ ಬಣ ರಾಜಕೀಯ ಹೆಚ್ಚಾಗಿದೆ. ಅಭ್ಯರ್ಥಿ ಪರ ಬಿಜೆಪಿ ಶಾಸಕರೇ ದುಡಿಯುತ್ತಿಲ್ಲ. ಅಭ್ಯರ್ಥಿ ಪರ ಯಾರೂ ಇಲ್ಲದ ಕಾರಣ ಮೋದಿಯವರನ್ನೇ ಕರೆಸಬೇಕಾಯಿತು. ಆದರೆ ಅವರು ಕೂಡ ಮನಸ್ಸಿಲ್ಲದ ಮನಸ್ಸಿಂದ ಬಹಿರಂಗ ಸಭೆ ನಡೆಸದೆ ಕೇವಲ ರೋಡ್ ಶೋ ನಡೆಸಿ ಹೋದರು. ಜಿಲ್ಲೆಯಲ್ಲಿ, ದೇಶದಲ್ಲಿ ಎಲ್ಲೂ ಮೋದಿ ಹವಾ ಕೆಲಸ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.

ಅವರು ಎ.24 ರಂದು ನಗರದ ಕಾಂಗ್ರೆಸ್ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಮೋದಿ ಹವಾ ಎಂದು ಹಿಂದೆಲ್ಲ ಹೇಳುತ್ತಿದ್ರು ಆದರೆ ಇಂದು ಆ ಹವಾ ಉಳಿದಿಲ್ಲ. ಮಂಗಳೂರಿಗೆ ಹಿಂದೆ ಮೋದಿ ಬಂದಿದ್ದಾಗ ಏರ್ ಪೋರ್ಟ್‌ನಿಂದ ಮಂಗಳೂರು ನಗರಕ್ಕೆ ರೋಡ್ ಶೋ ಏರ್ಪಡಿಸಲಾಗಿತ್ತು. ಲಕ್ಷಾಂತರ ಮಂದಿ ರಸ್ತೆಯ ಇಕ್ಕೆಲದಲ್ಲಿ ಜನ ಗಂಟೆಗಟ್ಟಲೆ ಕಾದು ಕುಳಿತಿದ್ರು. ಆದರೆ ಮೊನ್ನೆ ಮೋದಿ ಬಂದಾಗ ನಾರಾಯಣ ಗುರು ಸರ್ಕಲ್‌ನಿಂದ ಒಂದು ಕಿ.ಮೀ. ತನಕ ಮಾತ್ರ ರೋಡ್ ಶೋ ಮಾಡಿ ಕನಿಷ್ಠ 25000 ಜನ ಸೇರಿಸಲು ಬಿಜೆಪಿ ನಾಯಕರು ಪರದಾಡಿದ್ದಾರೆ ಎಂದು ಲೇವಡಿ ಮಾಡಿದರು. 

ಮೋದಿಯವರಿಗೆ ಚುನಾವಣೆ ಬಂದಾಗ ಮಂಗಳಸೂತ್ರ ನೆನಪಾಗಿದೆ. ಮಣಿಪುರ ವಿಷಯದ ಬಗ್ಗೆ ಮೋದಿ ಪಾರ್ಲಿಮೆಂಟ್ ನಲ್ಲಿ ಮಾತಾಡಿಲ್ಲ. ಅಲ್ಲಿಗೆ ಕಾಲಿಡಲಿಲ್ಲ. ಅಲ್ಲಿನ ಹೆಣ್ಣುಮಕ್ಕಳ ಬರ್ಬರ ಹತ್ಯೆಯಾದಾಗ ಮಂಗಳಸೂತ್ರ ನೆನಪಾಗಲಿಲ್ಲ. ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಸತ್ತಾಗ ಮಂಗಳಸೂತ್ರ ನೆನಪಾಗಲಿಲ್ಲ, ಈಗ ಸೋಲುವ ಭೀತಿಯಲ್ಲಿ ಏನೇನೋ ಮಾತಾಡುತ್ತಿದ್ದಾರೆ ಎಂದವರು ಹೇಳಿದರು. 

ಎಲ್ಲರೂ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ. ಮುಂದಿನ 5 ವರ್ಷಗಳ ಕಾಲ ಸುಭದ್ರ ಸರಕಾರ ಆಳ್ವಿಕೆಗೆ ತರಲು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತವನ್ನು ನೀಡಿ. ರಾಜ್ಯದಲ್ಲಿ ಕಾಂಗ್ರೆಸ್ 60 ವರ್ಷಗಳಲ್ಲಿ ಏನು ಮಾಡಿತ್ತು ಎಂದು ಜನರು ಪ್ರಶ್ನೆ ಮಾಡ್ತಿದ್ರು ಆದರೆ ಇಂದಿನ ದಿನಗಳಲ್ಲಿ ಅಂತ ಪ್ರಶ್ನೆ ಕೇಳಲು ಯಾರಿಗೂ ಅವಕಾಶವಿಲ್ಲ. ಯಾಕೆಂದರೆ ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಜನರ ವಿಶ್ವಾಸ ಗಳಿಸಿದೆ ಎಂದರು.

ಮಾಜಿ ಮೇಯರ್ ಮಹಾಬಲ ಮಾರ್ಲ, ಟಿ.ಎಂ. ಶಹೀದ್, ಜಿತೇಂದ್ರ, ಸುಭೋದ್ ಆಳ್ವ, ನೀರಜ್ ಪಾಲ್, ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article