Mangalore: 812 ಗ್ರಾಂ. ಚಿನ್ನ ವಶ
Saturday, April 13, 2024
ಮಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದಮ್ಮಾಮ್ ನಿಂದ ಆಗಮಿಸಿದ ಪ್ರಯಾಣಿಕರಿಂದ 58,78,880 ರೂ ಮೌಲ್ಯದ 812 ಗ್ರಾಂ ಚಿನ್ನವನ್ನು ಏ.11 ರಂದು ವಶಪಡಿಸಿಕೊಂಡಿದ್ದಾರೆ. ವಾಡಿಕೆಯ ಮೆಟಲ್ ಡಿಟೆಕ್ಟರ್ ಪರೀಕ್ಷೆಯ ಸಮಯದಲ್ಲಿ, ಪ್ರಯಾಣಿಕರ ಸೊಂಟದಿಂದ ಬೀಪ್ ಹೊರಹೊಮ್ಮಿತು. ಹೆಚ್ಚಿನ ತಪಾಸಣೆಯ ನಂತರ, ಅಧಿಕಾರಿಗಳು ಪ್ರಯಾಣಿಕರ ಗುದನಾಳದಲ್ಲಿ ಮೂರು ಸುತ್ತಿನ ಆಕಾರದ ವಸ್ತುಗಳೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿಕೊಂಡಿದ್ದರು.
ತಪಾಸಣೆ ವೇಳೆ 812 ಗ್ರಾಂ 24-ಕ್ಯಾರೆಟ್ ಚಿನ್ನಪತ್ತೆಯಾಗಿದೆ. ಮುಂದಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.