Mangalore: ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ
Saturday, April 13, 2024
ಮಂಗಳೂರು: ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, ಜಿ.ಎಸ್.ಟಿ.ಯಲ್ಲಿ ಮೋಸ, ಪ್ರವಾಹ ಮತ್ತು ಬರ ಪರಿಹಾರದ ಸಹಾಯನುಧಾನವನ್ನು ನೀಡದೆ ವಂಚನೆ ಮಾಡಿ ಅನ್ಯಾಯ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರದ ನಿಲುವು ಖಂಡಿಸಿ ಹಾಗೂ ಪ್ರಧಾನಿ ಮೋದಿ ನಡೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಐವನ್ ಡಿಸೋಜಾ, ಮುಖಂಡರಾದ ಕೆ.ಅಶ್ರಫ್, ಅಶ್ರಫ್ ಬಜಾಲ್, ಮಲಾರ್ ಮೋನು, ನೀರಜ್ ಚಂದ್ರಪಾಲ್, ಜೋಕಿಂ ಡಿ'ಸೋಜ, ಡಾ. ಶೇಖರ್ ಪೂಜಾರಿ, ಸತೀಶ್ ಪೆಂಗಲ್, ಹೇಮಂತ್ ಗರೋಡಿ, ಅಲಿಸ್ಟರ್ ಡಿಕುನ್ಹ, ಸಬಿತಾ ಇಸ್ಕಿತ್, ರಮಾನಂದ ಪೂಜಾರಿ, ಕವಿತ ವಾಸು, ಶಾಂತಲ ಗಟ್ಟಿ, ಝಕರಿಯಾ ಮಲಾರ್, ಡಿ.ಎಂ. ಮುಸ್ತಫ, ಇಮ್ರಾನ್ ಎ.ಆರ್., ಸಲೀಂ ಪಾಂಡೇಶ್ವರ, ಜಯರಾಜ್ ಕೋಟ್ಯಾನ್, ಆಶೀಫ್ ಬೆಂಗ್ರೆ, ಅನ್ಸಾರ್ ಸಾಲ್ಮಾರ, ಸವಾದ್ ಸುಳ್ಯ, ಸೌಹಾನ್ ಎಸ್.ಕೆ, ಸುಹಾನ್ ಆಳ್ವ ಮೊದಲಾದವರಿದ್ದರು.