Mangalore: ಕಾಂಗ್ರೆಸ್‌ನಿಂದ ಆತಂಕದಿಂದ ಬದುಕುವ ವಾತಾವರಣ: ಬ್ರಿಜೇಶ್ ಚೌಟ
ಮಂಗಳೂರು; ಕಾಂಗ್ರೆಸ್ ಸರಕಾರ ಹಿಂದೂಗಳಲ್ಲಿ ಅಭದ್ರತೆಯನ್ನು ಸೃಷ್ಟಿಸಿದೆ. ಮಹಿಳೆಯರು, ಯುವಕರು, ದಲಿತರು ಸೇರಿದಂತೆ ಎಲ್ಲ ವರ್ಗದವರು ಆತಂಕದಿಂದ ಬದುಕುವ ವಾತಾವರಣ ಸೃಷ್ಟಿಯಾಗಿದೆ ಎಂದು ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಡೇಂಜರ್ ಕಾಂಗ್ರೆಸ್ ಘೋಷಣೆಯಡಿ ಮಾನವ ಸರಪಳಿ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ಇಡೀ ಸಮಾಜಕ್ಕೆ ಡೇಂಜರ್. ಹಿಂದೂಗಳು, ಹಿಂದೂ ಜೀವನಪದ್ಧತಿಗೆ ಗೌರವ ಸಿಗುತ್ತಿಲ್ಲ. ಕಾಂಗ್ರೆಸ್ ದೇಶವಿರೋಧಿ, ಸಮಾಜವಿರೋಧಿ ಶಕ್ತಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ದ.ಕ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್- ಎಸ್‌ಡಿಪಿಐ ನಡುವೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್‌ನವರಿಗೆ ಅವರ ಅಭ್ಯರ್ಥಿಯ ಬಗ್ಗೆಯೇ ಗೊಂದಲವಿದೆ ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಜನರ ಜೇಬಿನಿಂದ ಕೈ ಹಾಕಿ ತೆಗೆದು ಇನ್ನೊಂದು ಕೈಯಲ್ಲಿ ಕೊಡುತ್ತಿದೆ. ಪಿಕ್‌ಪಾಕೆಟ್ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಕೊಡುತ್ತಿಲ್ಲ.
ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಕಾಂಗ್ರೆಸ್ ಮಾಡಿದ ಕಳ್ಳತನವನ್ನು ಜನರಿಗೆ ತೋರಿಸುವ ಪ್ರಯತ್ನವಾಗಿ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಯೋಜನೆಗಳ ಹೆಸರಿನಲ್ಲಿ ಒಂದು ಕೈಯಲ್ಲಿ ಜನರಿಗೆ ಕೊಟ್ಟ ಹಾಗೆ ಮಾಡಿ ಇನ್ನೊಂದು ಕಡೆ ತೆರಿಗೆ ಹೆಚ್ಚಳದ ಮೂಲಕ ಕಸಿದುಕೊಂಡಿದೆ. ಕೊಟ್ಟದ್ದಕ್ಕಿಂತ ದೋಚಿದ್ದೇ ಜಾಸ್ತಿ ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಜಗದೀಶ್ ಶೇಣವ, ವಿಜಯ್ ಕುಮಾರ್, ರಮೇಶ್ ಕೊಂಡೆಟ್ಟು ಮೊದಲಾದವರು ಪಾಲ್ಗೊಂಡಿದ್ದರು. ನಗರದ ಕ್ಲಾಕ್‌ಟವರ್ ವೃತ್ತದಿಂದ ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆಯವರೆಗೆ ಮಾನವ ಸರಪಳಿ ನಡೆಸಲಾಯಿತು. ಕಾಂಗ್ರೆಸ್ ಡೇಂಜರ್, ಕಾಂಗ್ರೆಸ್ ಪಿಕ್‌ಪಾಕೆಟ್ ಎಂಬ ಘೋಷಣೆ ಕೂಗಿ ಪ್ರತಿಭಟನೆ ನಡೆಸಲಾಯಿತು.










