Mangalore: ಸಾಮರಸ್ಯ ಕಾಪಾಡಲು ಗೆಲ್ಲಿಸುವಂತೆ ಕಾಂಗ್ರೆಸ್ ಮನವಿ: ಪದ್ಮರಾಜ್ ಆರ್.

Mangalore: ಸಾಮರಸ್ಯ ಕಾಪಾಡಲು ಗೆಲ್ಲಿಸುವಂತೆ ಕಾಂಗ್ರೆಸ್ ಮನವಿ: ಪದ್ಮರಾಜ್ ಆರ್.


ಮಂಗಳೂರು: ಕಳೆದ 33 ವರ್ಷಗಳಿಂದ ದ.ಕ. ಜಿಲ್ಲೆ, ಸಾಮರಸ್ಯದ ತುಳುನಾಡು ಕೋಮುಸೂಕ್ಷ್ಮ ಪ್ರದೇಶವೆಂಬ ಹಣೆಪಟ್ಟಿಯೊಂದಿಗೆ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಮತ್ತೆ ಜಿಲ್ಲೆಯನ್ನು ಸಾಮರಸ್ಯದ ನಾಡಾಗಿಸಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ತನ್ನನ್ನು ಗೆಲ್ಲಿಸಬೇಕೆಂದು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಮತದಾರರಿಗೆ ಮನವಿ ಮಾಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಪರಸ್ಪರ ಪ್ರೀತಿ ಹಂಚುವ ಮೂಲಕ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ನಡೆಸಲಾಗಿದೆ. ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಮತ ಯಾಚಿಸಲಾಗಿದೆ. ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕಾರ್ಯ ನಡೆಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು. 

ಕಾಂಗ್ರೆಸ್ ಈ ದೇಶವನ್ನು ಕಟ್ಟುವಲ್ಲಿ ಆರಂಭದಿಂದ ಮಾಡಿದ ತ್ಯಾಗ, ಸಾಧನೆಗಳ ಜತೆಗೆ ಕರ್ನಾಟಕ ರಾಜ್ಯ ಸರಕಾರ ಕಳೆದ ವಿಧಾನಸಭಾ ಚುನಾವಣೆಯ ವೇಳೆ ಘೋಷಿಸಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವುದನ್ನು ಮುಂದಿಟ್ಟು ಮತ ಯಾಚನೆ ಮಾಡಲಾಗಿದೆ. ಬಿಜೆಪಿಯ ದ್ವೇಷ ರಾಜಕಾರಣ, ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಅಮಾಯಕ ರನ್ನು ಆಸ್ಪತ್ರೆಗೆ ಸೇರುವಂತೆ ಮಾಡಿದ, ಪೋಷಕರನ್ನು ಅನಾಥವಾಗಿಸಿರುವ, ಯುವಕರು ಜೈಲು ಪಾಲಾಗುವಂತೆ ಮಾಡಿದ ವಿಷಯಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಲಾಗಿದೆ. ಜನ ಪ್ರಬುದ್ಧರಾಗಿದ್ದಾರೆ. ಹಾಗಾಗಿ ಈ ಬಾರಿ ಕಾಂಗ್ರೆಸ್ ಜಿಲ್ಲೆಯಲ್ಲಿ ಸತತ ಸೋಲಿನ ಸರಪಳಿಯಿಂದ ಹೊರಬಂದು ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವಿನ ಸೂಚನೆಯ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಎಂದಿನ ಚಾಳಿಯಂತೆ ಅಪಪ್ರಚಾರ ನಡೆಸಿದೆ. ಆದರೆ ಅದ್ಯಾವುದಕ್ಕೂ ಕಿವಿಗೊಡದೆ, ದ್ವೇಷಸಾಧಿಸದೆ ಪ್ರೀತಿಯಿಂದ ಚುನಾವಣೆ ಎದುರಿಸಬೇಕೆಂಬುದು ನನ್ನ ಕಳಕಳಿಯ ಮನವಿ. ಈ ಬಾರಿ ಕಾಂಗ್ರೆಸ್ ಪರ ಮತಯಾಚನೆಗಾಗಿ ಹಿಂದೆಂಗಿಂತಲೂ ಪರಿಶ್ರಮದಿಂದ ದುಡಿದಿರುವ ಕಾರ್ಯಕರ್ತರು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಪಕ್ಷದಿಂದ ಮುಂದೆಯೂ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಆಗಲಿದೆ ಎಂದವರು ಹೇಳಿದರು. 

ಚನೆಯ ಸಂದರ್ಭ ನಗುಮುಖದಿಂದಲೇ ಮಾತನಾಡಿಸಿರುವ ರೀತಿ ಬದಲಾವಣೆಯನ್ನು ಬಯಸಿರುವುದು ಸ್ಫಷ್ಟವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪದ್ಮರಾಜ್ ಪ್ರತಿಕ್ರಿಯಿಸಿದರು. 

ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜಾ, ಶಶಿಧರ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ಮಹಾಬಲ ಮಾರ್ಲ, ನೀರಜ್ಪಾಲ್, ಶುಭೋದಯ ಆಳ್ವ, ವಿಕಾಸ್ ಶೆಟ್ಟಿ, ಶಾಹುಲ್ ಹಮೀದ್, ಜಿತೇಂದ್ರ, ಮುಹಮ್ಮದ್, ಸವಾದ್ ಸುಳ್ಯ ಮೊದಲಾವದರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article