Mangalore: ಮೋದಿ ರೋಡ್ ಶೋನಲ್ಲಿ ಬದಲಾವಣೆ
Saturday, April 13, 2024
ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.14ರಂದು ಮಂಗಳೂರು ರೋಡ್ ಶೋ ಸಮಯ ಬದಲಾವಣೆಯಾಗಿದೆ.
ನಿಗದಿತ 6 ಗಂಟೆ ಬದಲು ರಾತ್ರಿ 7.45ಕ್ಕೆ ರೋಡ್ ಶೋ ನಡೆಸಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ಅಂದರೆ, 8.45ರ ವರೆಗೆ ರೋಡ್ ಶೋ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ
ಕಾರ್ಯದರ್ಶಿ ಸುನಿಲ್ ಕುಮಾರ್ ಮಂಗಳೂರಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಲೇಡಿಹಿಲ್ ನಾರಾಯಣಗುರು ವೃತ್ತದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೋದಿಯವರ ರೋಡ್‌ಶೋ ಗೆ ಚಾಲನೆ ಸಿಗಲಿದೆ. ಅಲ್ಲಿಂದ ತೆರೆದ ವಿಶೇಷ ವಾಹನದಲ್ಲಿ ಬಿಗು
ಭದ್ರತೆಯೊಂದಿಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ. ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷ ಸತಿಶ್ ಕುಂಪಲ ಮತ್ತಿತರರು ಸಾಥ್ ನೀಡಲಿದ್ದಾರೆ ಎಂದರು.