Mangalore: ಬಿಜೆಪಿ ಕಾನೂನು ಪ್ರಕೋಷ್ಠದಿಂದ ಮತಯಾಚನೆ
ಮಂಗಳೂರು: ಬಿಜೆಪಿ ಕಾನೂನು ಪ್ರಕೋಷ್ಟ ವತಿಯಿಂದ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರ ಪರವಾಗಿ ಎ.22 ರಂದು ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆ, ಸೆಂಟ್ರಲ್ ಮಾರ್ಕೆಟ್ ಪರಿಸರದಲ್ಲಿ ಮತಯಾಚನೆ ನಡೆಸಲಾಯಿತು.
ಇದೇ ವೇಳೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ನಗರದೆಲ್ಲೆಡೆ ಈಗಾಗಲೇ ಬಿಜೆಪಿ ಪರ ವಾತಾವರಣ ಮೂಡಿದೆ. ನಮ್ಮ ಅಭ್ಯರ್ಥಿಯ ಗೆಲುವು ಶತಃಸಿದ್ದವಾಗಿದೆ. ಇದು ಹಿಂದುತ್ವದ ಹಾಗೂ ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ ಎಂದು ಪ್ರಕೋಷ್ಠದ ಸಂಚಾಲಕರಾದ ಶಂಭುಶರ್ಮರವರು ತಿಳಿಸಿದ್ದಾರೆ.
ಮತಯಾಚನೆ ಅಭಿಯಾನದಲ್ಲಿ ಕಾನೂನು ಪ್ರಕೋಷ್ಠ ಜಿಲ್ಲಾ ಸಂಚಾಲಕ ಕೆ. ಶಂಭು ಶರ್ಮ, ಸಹಸಂಚಾಲಕ ಪ್ರಮೋದ್ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಹಿರಿಯ ವಕೀಲರಾದ ಸುಧಾಕರ ಜೋಶಿ, ರಾಮಕೃಷ್ಣ ರೈ, ನರಸಿಂಹ ಹೆಗ್ಡೆ, ನಂದಕಿಶೋರ್, ಪುರುಷೋತ್ತಮ ಭಟ್, ಪುಷ್ಪಲತಾ ಯು.ಕೆ, ಅಧಿವಕ್ತ ಪರಿಷತ್‌ನ ರಾಜ್ಯ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಉಪಾಧ್ಯಕ್ಷ ರಾಘವೇಂದ್ರ ರಾವ್, ಬಿಜೆಪಿ ಮಹಿಳಾ ಮೋರ್ಚಾ ಕೋಶಾಧಿಕಾರಿ ಸುಮನ ಶರಣ್, ವಕೀಲರಾದ ದೇವಿಪ್ರಸಾದ್ ಸಾಮಾನಿ, ಸುಜಯ್ ಬಿ, ಅನಿಲ್ ಕುಮಾರ್, ಈಶ್ವರ್ ಕೊಟ್ಟಾರಿ, ಕಾರ್ಪೋರೇಟರ್ ಸಂಗೀತಾ ನಾಯಕ್ ಉಪಸ್ಥಿತರಿದ್ದರು.