Mangalore: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ

Mangalore: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಪ್ರವೇಶಾತಿ ಪ್ರಾರಂಭ


ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ 2024-25ನೇ ಸಾಲಿನ ಪ್ರಥಮ ಪದವಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳು ಪದವಿ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಿದ್ದು, UUCMS (Unified University & College Management System) ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ಆದುದರಿಂದ ಪ್ರವೇಶ ಬಯಸುವ ಅಭ್ಯರ್ಥಿಗಳು ಸದ್ಯಕ್ಕೆ ತಮ್ಮ ಮಾಹಿತಿಯನ್ನು ಕಾಲೇಜಿನ ಕಚೇರಿಯಲ್ಲಿರುವ ರಿಜಿಸ್ಟರ್‌ನಲ್ಲಿ ದಾಖಲಿಸಿಕೊಳ್ಳಬೇಕಾಗಿದೆ.

ಇದರ ಜೊತೆಗೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇದರ ವೆಬ್ಸೈಟ್ www.universitycollegemangalore.com 2024-25 ಶೀರ್ಷಿಕೆಯಡಿಯಲ್ಲಿ “UUCMS link to online appilcation ಅಒS ಐiಟಿಞ ಣo ಔಟಿಟiಟಿe ಂಠಿಠಿಟiಛಿಚಿಣioಟಿ” ನಲ್ಲಿ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ೦೪.೦೫.೨೦೨೪ ಆಗಿರುತ್ತದೆ.

ಕೋರ್ಸುಗಳು: ಬಿ.ಎ./ಬಿ.ಎಸ್ಸಿ./ಬಿ.ಕಾಂ./ಬಿಬಿಎ (ಟೂರಿಸಂ ಆಂಡ್ ಟ್ರಾವೆಲ್) 

ಎಲ್ಲಾ ಕೋರ್ಸುಗಳಿಗೆ ಲಭ್ಯವಿರುವ ಭಾಷೆಗಳು: ಇಂಗ್ಲಿಷ್, ಕನ್ನಡ, ಹಿಂದಿ ಮತ್ತು ಸಂಸ್ಕೃತ., ಬಿ.ಎ. ಪದವಿ ವಿಷಯಗಳು (23 ಸಂಯೋಜನೆಗಳಲ್ಲಿ ಆಯ್ಕೆಗೆ ಅವಕಾಶ): ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಪ್ರವಾಸೋದ್ಯಮ, ಕನ್ನಡ (ಐಚ್ಛಿಕ), ಇಂಗ್ಲಿಷ್ (ಐಚ್ಛಿಕ) ಮತ್ತು ಹಿಂದಿ (ಐಚ್ಛಿಕ), ತುಳು (ಐಚ್ಛಿಕ)., ಬಿ.ಎಸ್ಸಿ. ಪದವಿ ವಿಷಯಗಳು (10 ಸಂಯೋಜನೆಗಳಲ್ಲಿ ಆಯ್ಕೆಗೆ ಅವಕಾಶ): ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಗಣಕ ವಿಜ್ಞಾನಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಮತ್ತು ಸೂಕ್ಷ್ಮಾಣುಜೀವಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ವಿಶ್ವವಿದ್ಯಾನಿಲಯ/ಸರಕಾರದ ನಿಯಮಾವಳಿಗಳ ಪ್ರಕಾರ ಪ್ರವೇಶವನ್ನು ನೀಡಲಾಗುತ್ತದೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article