Mangalore: ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಭೂಮಿ ಸುರಕ್ಷಿತ: ಡಾ. ಸಿದ್ದರಾಜು ಎಂ. ಎನ್‌.

Mangalore: ಪ್ಲಾಸ್ಟಿಕ್ ತ್ಯಜಿಸಿದರೆ ಮಾತ್ರ ಭೂಮಿ ಸುರಕ್ಷಿತ: ಡಾ. ಸಿದ್ದರಾಜು ಎಂ. ಎನ್‌.


ಮಂಗಳೂರು:
 ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ವಿಶ್ವ ಭೂದಿನವನ್ನು ಆಚರಿಸಲಾಯಿತು. 

ಐಕ್ಯುಏಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್‌., ವಿಶ್ವ ಭೂ ದಿನದ ಮಹತ್ವ ಮತ್ತು ಪ್ರಪಂಚದಾದ್ಯಂತ ಆಚರಣೆ ಮಾಡುವ ಅಗತ್ಯವನ್ನು ತಿಳಿಸಿದರು. 

1969ರಲ್ಲಿ ಅಮೆರಿಕಾದಲ್ಲಿ ಕಚ್ಚಾ ತೈಲ ಬಾವಿಯೊಂದರ ಸೋರಿಕೆಯ ಪರಿಣಾಮ ಸುಮಾರು 9000 ಜೀವರಾಶಿಗಳು ಪ್ರಾಣ ತೆರಬೇಕಾಯಿತು. ಅಂದಿನ ಸೆನೆಟರ್ ಜಿ ನೆಲ್ಸನ್ ಪ್ರಾರಂಭ ಮಾಡಿದ ಜನಾಂದೋಲನ ಇಂದು ವಿಶ್ವ ಭೂದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಶ್ವ ಭೂ ದಿನದ ಅಂಗವಾಗಿ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿ ಸುನಿತಾ, ಸ್ವಾತಿ ಮತ್ತು ತಂಡದವರು ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಭೂ ದಿನಕ್ಕೆ ಸಂಬಂಧಿಸಿದಂತೆ ಅನೇಕ ಕೌತಕ ವಿಷಯಗಳನ್ನು ತಿಳಿಸಿಕೊಟ್ಟರು.

ಉತ್ತಮ್ ಮತ್ತು ತಂಡದವರು ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಅನಿವಾರ್ಯವೇ? ಎಂಬ ವಿಷಯದ ಕುರಿತು ಚರ್ಚಾಸ್ಪರ್ಧೆ ನಡೆಸಿಕೊಟ್ಟರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article