Mangalore: ಮೀನುಗಾರಿಕಾ ಧಕ್ಕೆ ಪ್ರದೇಶಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತಯಾಚನೆ
ಮಂಗಳೂರು: ಮಂಗಳೂರು ಬಂದರು ಧಕ್ಕೆ ಮೀನುಗಾರಿಕಾ ಪ್ರದೇಶಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮೀನುಗಾರಿಕಾ ಮಹಿಳೆಯರು ಮತ್ತು ಸ್ಥಳೀಯ ಮೀನುಗಾರಿಕಾ ನಾಯಕರುಗಳೊಂದಿಗೆ ಭೇಟಿ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಅನೇಕ ಮೀನುಗಾರರು ತಮ್ಮ ಅನೇಕ ಸಮಸ್ಯೆಗಳನ್ನು ಹೇಳಿದ್ದು, ಅದನ್ನು ಚುನಾವಣಾ ನಂತರ ಈಡೇರಿಸುವುದಾಗಿ ಮತ್ತು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿಕೊಡುವಂತೆ ವಿನಂತಿಸಿದರು.
ಮೀನುಗಾರರ ಸಮುದಾಯದ ಸಮಸ್ಯೆಯನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಸೌಲಭ್ಯವನ್ನು ಮೀನುಗಾರಿಕಾ ಪ್ರದೇಶದಲ್ಲಿ ಒದಗಿಸಿಕೊಡಲು ಕಾಂಗ್ರೆಸ್ ಸರಕಾರ ಬದ್ಧರಾಗಿರುವುದಾಗಿ ತಿಳಿಸಿದರು. ಸುಮಾರು 2 ಗಂಟೆಗಳ ಕಾಲ ಮೀನುಗಾರರ ಜೊತೆ ಸೌಹರ್ದ ನಡೆಸಿ, ಮೀನುಗಾರರ ಸಮಸ್ಯೆಯನ್ನು ತಿಳಿದುಕೊಂಡರು ಮತ್ತು ಈ ಚುನಾವಣೆಯಲ್ಲಿ ಮೀನುಗಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದಾಗಿ ಭರವಸೆಯನ್ನು ನೀಡಿದರು.
ಮಾಜಿ ಶಾಸಕರುಗಳಾದ ಐವನ್ ಡಿ’ಸೋಜ, ಜೆ.ಆರ್. ಲೋಬೊ, ಮಾಜಿ ಮೇಯರುಗಳಾದ ಶಶಿಧರ್ ಹೆಗ್ಡೆ, ಕೆ. ಅಶ್ರಫ್, ಮೀನುಗಾರರ ನಾಯಕರಾದ ಅಶ್ರಫ್ ಬೆಂಗ್ರೆ, ನವೀನ್ ಡಿಸೋಜ, ಸ್ಥಳೀಯ ಕಾರ್ಪೋರೇಟರ್ ಲತೀಫ್ ಕಂದಕ್, ರಮಾನಂದ ಪೂಜಾರಿ, ಅಬಿಬುಲ್ಲ, ಇಮ್ರಾನ್, ಹಸನ್ ಪಳ್ನೀರ್ ಮತ್ತಿತರರು ಉಪಸ್ಥಿತರಿದ್ದರು.