Mangalore: ತಣ್ಣೀರುಬಾವಿ ಬೀಚ್ ನಲ್ಲಿ ಮತ ಜಾಗೃತಿ ಕಲರವ

Mangalore: ತಣ್ಣೀರುಬಾವಿ ಬೀಚ್ ನಲ್ಲಿ ಮತ ಜಾಗೃತಿ ಕಲರವ


ಮಂಗಳೂರು: ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ  ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ ಮತದಾನ ಜಾಗೃತಿಗಾಗಿ ನಗರದ ತಣ್ಣೀರುಬಾವಿ ಬ್ಲೂಪ್ಲಾಗ್ ಬೀಚ್ ನಲ್ಲಿ ಎ.20 ರ‌ಂದು ಆಯೋಜಿಸಿದ್ದ ಗಾಳಿಪಟ ಉತ್ಸವ, ಸರ್ಫಿಂಗ್,  ಬೀದಿನಾಟಕ ಹಾಗೂ ಮರಳಿನಲ್ಲಿ ಮೂಡಿಬಂದ ಕಲಾ ಕೃತಿಯಲ್ಲಿ ಎಲ್ಲರ ಗಮನ ಸೆಳೆಳಿದ್ದು ಮಾತ್ರವಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತ್ತು.

ಜಿ.ಪಂ. ಸಿಇಓ ಚಾಲನೆ: 

ಜಿಲ್ಲಾ ಸ್ಪೀಪ್‌ ಸಮಿತಿ ಅಧ್ಯಕ್ಷ ಜಿಪಂ ಸಿಇಓ ಡಾ. ಆನಂದ ಕೆ. ಅವರು ಖುದ್ದು ಗಾಳಿಪಟ ಹಾರಿಸುವ ಮೂಲಕ ಮತದಾನ ಮಾಡುವ ಸಂದೇಶ  ಸಾರಿದರು. ನೆರದಿದ್ದ ಗಾಳಿಪಟ ಪ್ರೇಮಿಗಳು ಆಗಸದಲ್ಲಿ ಹಾರಡುತ್ತಿದ್ದ ಗಾಳಿಪಟಗಳನ್ನು ನೋಡಿ ಕಣ್ತುಂಬಿಸಿಕೊಂಡರು. 

ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ನೈಜ್ಯವಾಗಿ ಮತದಾನ ಮಾಡಬೇಕು. ನಗರವಾಸಿಗಳು ಹೆಚ್ಚು ಮತದಾನ‌ಮಾಡುವ ಮೂಲಕ ಜಿಲ್ಲೆಯ ಮತದಾನ ಪ್ರಮಾಣ ಹೆಚ್ಚಿಸುಂತೆ ಸಿಇಓ ಡಾ. ಆನಂದ್ ಕೆ. ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಐಕಾನ್ ಅಶ್ವಿನ್  ನಾಯ್ಕ್ ಅವರು ಮಾತನಾಡಿ, ಎಲ್ಲರು ಮುಕ್ತವಾಗಿ ಮತದಾನ ಮಾಡಬೇಕು. ಅದನ್ನು ಹಬ್ಬದ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಆಸಕ್ತಿಯಿಂದ ಭಾಗವಹಿಸಬೇಕು. ಪ್ರಜ್ಞಾವಂತ ಮತದಾರರು  ಹೆಚ್ಚಿನ ಪ್ರಮಾಣದಲ್ಲಿ ಈ‌ ಬಾರಿ‌ ಮತದಾನ ಮಾಡಬೇಕು ಎಂದರು.

ಈ ವೇಳೆ ಚುನಾವಣೆಯ ಮಹತ್ವ ಸಾರುವ  ಬೀದಿನಾಟಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ  ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿಗಳು, ಸ್ವೀಪ್ ಅಧಿಕಾರಿಗಳು,  ವಿವಿಧ ಸರ್ಫರ್ ಗಳು ಉಪಸ್ಥಿತರಿದ್ದರು.














Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article