Mangalore: ಮತ ಚಲಾಯಿಸಿದ ಪದ್ಮರಾಜ್ ಆರ್.
Saturday, April 27, 2024
ಮಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಮಂಗಳೂರಿನ ಕಪಿತಾನಿಯೋ ಶಾಲೆಯ ಮಂಗಟ್ಟೆಯಲ್ಲಿ ಮತ ಚಲಾಯಿಸಿದರು.
ಪತ್ನಿ ಸಾಯಿರಶ್ಮಿರಾಜ್ ಪೂಜಾರಿ ಹಾಗೂ ಪುತ್ರಿ ರಿತುರಾಜ್ ಹಾಗೂ ಹಿತೈಷಿಗಳೊಂದಿಗೆ ಆಗಮಿಸಿದ ಅವರು, ಮತ ಚಲಾಯಿಸಿದರು.
ಅಭಿನಂದನೆ ಸಲ್ಲಿಸಿದ ಪದ್ಮರಾಜ್ ಆರ್.
ದ.ಕ. ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಯಾವುದೇ ಗೊಂದಲಗಳಿಲ್ಲದೆ ಶಾಂತಿಯುತವಾಗಿ ನಡೆದಿದೆ. ಉರಿಬಿಸಿಲಿನ ನಡುವೆಯೂ ಮತದಾರರು ಉತ್ಸಾಹಭರಿತರಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಮ್ಮ ಪಕ್ಷದ ನೀತಿ, ಕಾರ್ಯಕ್ರಮ ಮತ್ತು ಅಭ್ಯರ್ಥಿಗಳ ಮೇಲೆ ವಿಶ್ವಾಸ ಇಟ್ಟು ಮತ ನೀಡಿದ ಮತದಾರರಿಗೆ ಅಭಿನಂದನೆ.