Mangalore: ಹಿಂದುಳಿದ ವರ್ಗಕ್ಕೆ ಮುಸ್ಲಿಮರ ಸೇರ್ಪಡೆ-ಹಿಂದುಗಳಿಗೆ ಎಚ್ಚರಿಕೆಯ ಕರೆಗಂಟೆ ಯೋಚಿಸಿ ಮತ ಚಲಾಯಿಸಿ: ವಿಶ್ವ ಹಿಂದೂ ಪರಿಷದ್
ಮಂಗಳೂರು: ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಕರ್ನಾಟಕ ಸರಕಾರ ಮೀಸಲು ನೀಡುವ ಸಲುವಾಗಿ ಇಡೀ ಮುಸ್ಲಿಂ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿರುವುದು ಬಹಳ ಆತಂಕಕಾರಿಯಾಗಿದೆ.
ಮುಸ್ಲಿಮರ ವೋಟಿಗೋಸ್ಕರ (OBC ) ಹಿಂದುಳಿದ ವರ್ಗಕ್ಕೆ ಅವರನ್ನು ಸೇರಿಸಿ ಬಹುಸಂಖ್ಯಾತರಾದ ಹಿಂದೂಗಳ ಹಕ್ಕನ್ನು ಕಸಿದುಕೊಳ್ಳುವ ಸಾಧ್ಯತೆ ಇದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಸರಕಾರಿ ಕೆಲಸ ನೇಮಕಾತಿಯಲ್ಲಿ ಪೊಲೀಸ್ ಇಲಾಖೆ, ಇತರೆ ಸರಕಾರಿ ಸ್ವಾಮ್ಯಗಳ ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಮುಕ್ತ ಅವಕಾಶ ಕೊಟ್ಟಂತಾಗುತ್ತದೆ. ಇದರಿಂದ ಹಿಂದುಳಿದ ವರ್ಗದ ಹಿಂದುಗಳಿಗೆ ಘೋರ ಅನ್ಯಾಯವಾಗಲಿದೆ.
ದೇಶದ ಸಂಪತ್ತು ಮುಸ್ಲಿಮರಿಗೂ ಪಾಲು-ರಾಹುಲ್ ಗಾಂಧಿ ಹೇಳಿಕೆ-ಹಿಂದುಗಳಿಗೆ ಬಗೆದ ದ್ರೋಹ:
ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ದೇಶದ ಎಲ್ಲ ವರ್ಗದವರ ಸಂಪತ್ತನ್ನು ಸರ್ವೇ ಮಾಡಿ ಹಂಚಲಾಗುವುದು ಎಂದು ಕಾಂಗ್ರೆಸ್ ನಾಯಕನ ಹೇಳಿಕೆ ಬಹಳ ಗಂಭೀರವಾಗಿದೆ. ಶೇಕಡಾ 80ಶೇ. ಇರುವ ಹಿಂದೂಗಳ ಆಸ್ತಿ ಪಾಸ್ತಿ, ಸಂಪತ್ತು ಬಲವಂತವಾಗಿ ಕಸಿದುಕೊಂಡು ಮುಸ್ಲಿಮರಿಗೆ ನೀಡುವ ಉದ್ದೇಶವಾಗಿದ್ದು, ಹಿಂದೂಗಳು ಎಚ್ಚೆತ್ತುಗೊಳ್ಳಬೇಕಾಗಿದೆ. ಹಿಂದುಗಳನ್ನು 2 ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶವಾಗಿದ್ದು .ಕಾಂಗ್ರೆಸ್ ನ ಈ ವೋಟ್ ಬ್ಯಾಂಕ್ ರಾಜಕೀಯವನ್ನು ಹಿಂದೂಗಳು ತಿರಸ್ಕರಿಸಬೇಕಾಗಿದೆ.
ಯೋಚಿಸಿ ಮತ ಚಲಾಯಿಸಿ:
ಕಾಂಗ್ರೆಸ್ ನ ಈ ಹಿಂದೂ ವಿರೋಧಿ 'ಮುಸ್ಲಿಮರ ತುಷ್ಟಿಕರಣ ರಾಜಕಾರಣವನ್ನು ದಿಕ್ಕರಿಸಿ ಹಿಂದೂಗಳ ಹಿತ ಬಯಸುವ , ದೇಶದ ಭದ್ರತೆ, ಅಭಿವೃದ್ಧಿ ಗೋಸ್ಕರ ಕೆಲಸ ಮಾಡುವ ಸರಕಾರ ಬರಬೇಕಾಗಿದೆ.
ಚುನಾವಣೆಯಂದು ಹಿಂದೂಗಳು 100ಶೇ. ಮತದಾನ ಮಾಡಬೇಕಾಗಿದೆ . ಹಾಗಾಗಿ ಎಲ್ಲ ಹಿಂದೂಗಳು ಯಾರಿಗೆ ಮತ ಹಾಕಬೇಕು ಎಂಬುದನ್ನು ಯೋಚಿಸಿ ತಪ್ಪದೆ ಕಡ್ಡಾಯವಾಗಿ ಮತ ಚಲಾಯಿಸಬೇಕಾಗಿ ತಮ್ಮಲ್ಲಿ ವಿಶ್ವ ಹಿಂದೂ ಪರಿಷದ್ ವಿನಂತಿಸುತ್ತದೆ.