Moodubidire: ಜೆಇಇ ಮೈನ್ಸ್: ಎಕ್ಸಲೆಂಟ್' ಮೂಡುಬಿದಿರೆ ಸಾಧನೆ

Moodubidire: ಜೆಇಇ ಮೈನ್ಸ್: ಎಕ್ಸಲೆಂಟ್' ಮೂಡುಬಿದಿರೆ ಸಾಧನೆ


ಮೂಡುಬಿದಿರೆ: ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 

ಎರಡು ಹಂತಗಳಲ್ಲಿ ನಡೆದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಒಟ್ಟು 130 ವಿದ್ಯಾರ್ಥಿಗಳು ಹಾಜರಾಗಿದ್ದು 78 ವಿದ್ಯಾರ್ಥಿಗಳು ಉತ್ತಮ ಪರ್ಸೆಂಟೈಲ್ ಪಡೆದು ಜೆಇಇ ಅಡ್ವಾನ್ಡ್ಸ್ ಅರ್ಹತೆ ಪಡೆದಿದ್ದಾರೆ. 

ನಿಶಾಂತ್ ಪಿ ಹೆಗಡೆ (99.5545), ಸ0ಜಯ್ ಬಿರಾದಾರ್ (99.4222), ಸಚಿನ್ ವಿ.ನಾಗರಡ್ಡಿ(99.3426), ಸೃಜನ್ ಎಂ.ಆರ್ ( 99.0462) 99 ಪರ್ಸೆಂಟೈಲ್ ಗಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. ವಿ.ಚಿರಾಗ್ ಕಂಚಿರಾಯ ರಾಷ್ಟ್ರಮಟ್ಟದಲ್ಲಿ 1106 ನೇ ರ‍್ಯಾಂಕ್(ಎಸ್.ಸಿ), ಸಂಜಯ್ ಬಿರಾದಾರ್ 1321 ನೇ ರ‍್ಯಾಂಕ್ , ಸಚಿನ್ ವಿ.ನಾಗರಡ್ಡಿ 1517 ನೇ ರ‍್ಯಾಂಕ್ , ಮತ್ತು ಸಾನ್ವಿ ಟಿ.ಎಸ್ 3022 ನೇ ರ‍್ಯಾಂಕ್(ಎಸ್.ಟಿ), ಶ್ರೀಶೈಲ್ ಬಿ.ಪಾಟೀಲ್ 4590ನೇ ರ‍್ಯಾಂಕ್, ರೋಹನ್ 4803 ನೇ ರ‍್ಯಾಂಕ್ ನಿಶಾಂತ್ ಪಿ.ಹೆಗಡೆ 7251 ನೇ ರ‍್ಯಾಂಕ್(ಸಿ.ಆರ್.ಎಲ್) ಗಳಿಸಿದ್ದಾರೆ.

ಎರಡನೇ ಹಂತದ ಪ್ರವೇಶ ಪರೀಕ್ಷೆಯಲ್ಲಿ ನಿಖಿಲ್ ಬಿ.ಗೌಡ ಮತ್ತು ಭಾರ್ಗವಿ ಭೌತಶಾಸ್ತ್ರ ವಿಷಯದಲ್ಲಿ 100 ಪರ್ಸೆ0ಟೈಲ್ ನ್ನು ಪಡೆದಿರುತ್ತಾರೆ. ಭೌತ ಶಾಸ್ತ್ರದಲ್ಲಿ 11 ವಿದ್ಯಾರ್ಥಿಗಳು, ರಸಾಯನಶಾಸ್ತçದಲ್ಲಿ 6 ವಿದ್ಯಾರ್ಥಿಗಳು ಮತ್ತು ಗಣಿತಶಾಸ್ತçದಲ್ಲಿ 4 ವಿದ್ಯಾರ್ಥಿಗಳು 99 ಪರ್ಸೆ0ಟೈಲ್ ಗಿ0ತ ಅಧಿಕ ಅಂಕವನ್ನು ಪಡೆದುಕೊಂಡಿದ್ದಾರೆ. 

ಸಾಧಕ ವಿದ್ಯಾರ್ಥಿಗಳನ್ನು ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸ0ಯೋಜಕ ರಾಮಮೂರ್ತಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article