Moodubidire: ಜೆಇಇ ಮೈನ್ಸ್: ಆಳ್ವಾಸ್ ವಿದ್ಯಾರ್ಥಿಗಳಿಂದ ಗಮನಾರ್ಹ ಸಾಧನೆ

Moodubidire: ಜೆಇಇ ಮೈನ್ಸ್: ಆಳ್ವಾಸ್ ವಿದ್ಯಾರ್ಥಿಗಳಿಂದ ಗಮನಾರ್ಹ ಸಾಧನೆ


ಮೂಡುಬಿದಿರೆ: ಜೆಇಇ ಮೈನ್ಸ್-2ರಲ್ಲಿ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. 

ಎಚ್.ಆರ್ ರಜತ್ 99.6655363 ಪರ್ಸಂಟೈಲ್ ಪಡೆದರೆ, ಪ್ರಶಾಂತ್ 99.1289068 ಪರ್ಸಂಟೈಲ್, ಪ್ರಜ್ವಲ್ ಚೌಧರಿ ನಂದೇಲಾ 99.0154909 ಪರ್ಸಂಟೈಲ್ ಪಡೆದಿದ್ದಾರೆ.

ಪ್ರೀತಂ ಎಂ., ದರ್ಶನ್ ಕುಮಾರ್, ನಮಿತ್ ಎ.ಪಿ, ನವೀನ್ ಬಿ.ಸೋಲಂಕಿ, ಅಭಿಷೇಕ್ ಗೌಡ, ಎಂ.ಡಿ ಸಾಹಿಲ್, ರೋಹಿತ್, ಪುನೀತ್, ರೋಹಿತ್ ಕುಮಾರ್ ಎಲ್., ರಕ್ಷಣ್ ಡಿಶೇಖ, ಪ್ರಜ್ವಲ್ ಡಿ.ಎಸ್ 98 ಪರ್ಸಂಟೈಲ್‌ಗಿಂತ ಅಧಿಕ ಅಂಕಗಳನ್ನು ಪಡೆದಿದ್ದಾರೆ. 

ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮ್ಮನ್ನವರ್ ರಾಷ್ಟ್ರ ಮಟ್ಟದಲ್ಲಿ 290ನೇ ರ‍್ಯಾಂಕ್ ಪಡೆದರೆ, ಪ್ರಥಮ್ ಎಸ್. 425ನೇ ರ‍್ಯಾಂಕ್, ಆರ್ ರಕ್ಷಿತಾ 865ನೇ ರ‍್ಯಾಂಕ್ ಗಳಿಸಿದ್ದಾರೆ. 98 ಪರ್ಸಂಟೈಲ್‌ಗಿಂತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್‌ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್‌ಗಿಂತ ಅಧಿಕ 68, 95 ಪರ್ಸಂಟೈಲ್‌ಗಿಂತ 120, ಹಾಗೂ 234 ವಿದ್ಯಾರ್ಥಿಗಳು 90 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. 

ಭೌತಶಾಸ್ತ್ರ ವಿಷಯದಲ್ಲಿ 2 ವಿದ್ಯಾರ್ಥಿಗಳು 100 ಪರ್ಸಂಟೈಲ್ ಪಡೆದರೆ, 24 ವಿದ್ಯಾರ್ಥಿಗಳು 99 ಪರ್ಸಂಟೈಲ್‌ಗಿಂತ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

ರಸಾಯನಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ ಅಧಿಕ 48 ವಿದ್ಯಾರ್ಥಿಗಳು, ಗಣಿತ ವಿಷಯದಲ್ಲಿ 99 ಪರ್ಸಂಟೈಲ್‌ಗಿಂತ 5 ವಿದ್ಯಾರ್ಥಿಗಳು ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article