Moodubidire: ಮೂಡುಬಿದಿರೆ ತಾಲೂಕಿನಲ್ಲಿ ಗಮನ ಸೆಳೆಯುತ್ತಿರುವ ಮೂರು ವಿಶೇಷ ಮತಗಟ್ಟೆಗಳು
Thursday, April 25, 2024
ಮೂಡುಬಿದಿರೆ: ಮೂಡುಬಿದಿರೆ ತಾಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಮೂರು ವಿಶೇಷ ಮತಗಟ್ಟೆಗಳು ಮದುವಣಗಿತ್ತಿಯಂತೆ ಶೃಂಗಾರಗೊಂಡು ಮತದಾರರನ್ನು ತನ್ನತ್ತ ಸೆಳೆಯಲು ಸಿದ್ಧಗೊಂಡಿದೆ.
ತೆಂಕಮಿಜಾರು ಗ್ರಾ.ಪಂಚಾಯತ್ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 201ರ ನೀರ್ಕೆರೆ ಪ್ರೌಢಶಾಲೆಯಲ್ಲಿ "ಧ್ಯೇಯಾ" ಎಂಬ ಯಕ್ಷಗಾನದ ಪರಿಕಲ್ಪನೆಯಡಿ ಯಕ್ಷಗಾನ ವೇಷಧಾರಿಗಳ ಫೋಟೋಗಳನ್ನು ಅಳವಡಿಸಲಾಗಿದೆ.
ಶಾಲೆಯ ಮುಂಭಾಗದಲ್ಲಿ ತೋರಣವನ್ನು ಕಟ್ಟಲಾಗಿದೆ. ಬಲೂನುಗಳನ್ನು ಜೋಡಿಸಲಾಗಿದೆ ಹಾಗೂ ರಂಗೋಲಿಗಳನ್ನು ಹಾಕುವ ಮೂಲಕ ಮತದಾನ ಕೇಂದ್ರದನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿದೆ.
ಮಹಿಳೆಯರಿಗೆ ಪ್ರಾಶಸ್ತ್ಯ ನೀಡುವ ವಿಷಯವಾಗಿ ಸಖೀ ಮತಗಟ್ಟೆಗೆ 50 ಮತಗಟ್ಟೆ ಸಂಖ್ಯೆಯ ಶಿರ್ತಾಡಿ ಗ್ರಾಮದ ಹೋಲಿ ಏಂಜಲ್ ಶಾಲೆ ಹಾಗೂ ಬೆಳುವಾಯಿ ಚರ್ಚ್ ಶಾಲೆಯು(PS 30) ಆಯ್ಕೆಯಾಗಿದೆ. ಶಿರ್ತಾಡಿ ಸಖೀ ಮತಗಟ್ಟೆಯಲ್ಲಿ ಸೆಲ್ಫಿ ಪಾಯಿಂಟ್ ಕೂಡ ಅಳವಡಿಸಲಾಗಿದೆ.
ಎಲ್ಲಾ ಮತಗಟ್ಟೆಯಲ್ಲಿಯೂ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್ ಸರಬರಾಜು, ಶೌಚಾಲಯ, ರ್ಯಾಂಪ್, ಗಾಲಿ ಕುರ್ಚಿ, ನೆರಳಿಗೆ ಶಾಮಿಯಾನದ ವ್ಯವಸ್ಥೆ ಮಾಡಲಾಗಿದೆ.


