Moodubidire: ಲೋಕಸಭಾ ಚುನಾವಣೆ: ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಲು ಹೊರಟ ಸಿಬ್ಬಂದಿಗಳು
ಮೂಡುಬಿದಿರೆ: ಲೋಕಸಭಾ ಚುನಸವಣೆಯ ಹಿನ್ನೆಯಲ್ಲಿ ವಿಧಾನಸಭಾ ಕ್ಷೇತ್ರ 219 ರ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಿರುವ ಅಧಿಕಾರಿಗಳು ಮತ್ತು ಸಿಬಂಧಿಗಳು ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಹಾವೀರ ಕಾಲೇಜು ಬಳಿಯಿಂದ ತಮಗೆ ನಿಗದಿ ಪಡಿಸಲಾಗಿರುವ ವಾಹನದಲ್ಲಿ ಹೊರಟರು.
ಕ್ಷೇತ್ರ ಮತಗಟ್ಟೆಗಳು, ಮಾಸ್ಟರಿಂಗ್, ಡಿ ಮಾಸ್ಟರಿಂಗ್ ಕೇಂದ್ರಗಳಲ್ಲಿ ಗುರುವಾರ ಸಾಯಂಕಾಲದವರೆಗೆ ಪೂರ್ವ ತಯಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಬಿಸಿಲಿನ ಬೇಗೆಯಲ್ಲೂ ಚುನಾವಣೆಯ ಕರ್ತವ್ಯಕ್ಕೆ ಹಾಜರಾಗಲು ಉತ್ಸಾಹದಿಂದ ಹೊರಟರು.
ಮೂಲ್ಕಿ ತಾಲೂಕು, ಮೂಡುಬಿದಿರೆ ತಾಲೂಕು, ಬಜ್ಪೆ, ಮೂಡುಶೆಡ್ಡೆ ಪ್ರದೇಶಗಳನ್ನು ಒಳಗೊಂಡಿರುವ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 219 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗಳಲ್ಲಿ ಅಧ್ಯಕ್ಷಾಧಿಕಾರಿ, ಉಪಾಧ್ಯಕ್ಷ ಅಧಿಕಾರಿ, ಇಬ್ಬರು ಪೋಲಿಂಗ್ ಅಧಿಕಾರಿಗಳು, ಒಬ್ಬರು ಪೊಲೀಸ್ ಮತ್ತು ಒಬ್ಬರು ಡಿಗ್ರೂಪ್ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಇವಿಎಎಂ, ವಿವಿಪ್ಯಾಟ್, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ಮತಗೂಡು, ದಾಖಲೆ ಪತ್ರಗಳು, ನೀರು, ಮೇಣದ ಬತ್ತಿ ಬೆಂಕಿಪೊಟ್ಟಣ ಮತ್ತಿತರ ಸಾಮಾಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಪರ್ಯಾಯ ಮತಯಂತ್ರ ಯೂನಿಟ್‌ಗಳನ್ನು ಹತ್ತು ಬೂತ್‌ಗಳಿಗೆ ಒಂದರಂತೆ ಒದಗಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಗಸ್ತು ವಾಹನಗಳಲ್ಲಿ ಒಂದು ಮತಯಂತ್ರಗಳನ್ನು ಪರ್ಯಾಯವಾಗಿ ಇರಿಸಲಾಗುತ್ತದೆ.
ಕರ್ತವ್ಯಕ್ಕೆ ತೆರಳುವ ಸಿಬಂದಿ ಗಳಿಗೆ 68 ಬಸ್‌ಗಳನ್ನು ನಿಯೋಜಿಸಲಾಗಿದೆ. ಸಿಬಂದಿಗಳಿಗೆ ಮತಗಟ್ಟೆಯಲ್ಲೇ ಊಟೋಪಚಾರ, ವಿಶ್ರಾಂತಿ ವ್ಯವಸ್ಥೆಯಿದೆ.
ಶುಕ್ರವಾರ ಬೆಳಗ್ಗೆ 5.30 ಇವಿಎಂ ಪರಿಶೀಲನೆ ಆಗಿ ಅಭ್ಯರ್ಥಿ ಏಜೆಂಟರ ಸಮ್ಮುಖ ಅಣಕು ಮತದಾನ ನಡೆಯಲಿದೆ. ಚುನಾವಣೆ ಆದ ಬಳಿಕ ಡಿಮಸ್ಟರಿಂಗ್ ಕೇಂದ್ರದ ಮಹಾವೀರ ಕಾಲೇಜಿಗೆ ಮತಯಂತ್ರಗಳನ್ನು ಇರಿಸಲಾಗುತ್ತದೆ. ಅಲ್ಲಿಂದ ಜಿಲ್ಲಾ ಭದ್ರತಾ ಕೊಠಡಿ ಇರುವ ಎನ್‌ಐಟಿಕೆಗೆ ಕಳುಹಿಸಲಾಗಿದೆ.


