Mangalore: ಶಕ್ತಿ ವಿದ್ಯಾ ಸಂಸ್ಥೆ-ದ್ವಿತೀಯ ಪಿಯುಸಿ ಸಾಧಕರಿಗೆ ಸನ್ಮಾನ
ಮಂಗಳೂರು: ನಗರದ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಪದವಿ ಪೂರ್ವಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದ 22 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉದ್ಘಾಟಿಸಿದ ಜ್ಞಾನ ಸುಧಾ ಕಾಲೇಜಿನ ಪ್ರಾಂಶುಪಾಲ ದಿನೇಶ್ ಎಂ. ಕೊಡವೂರು, ಶಕ್ತಿ ವಿದ್ಯಾ ಸಂಸ್ಥೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಎಳೆಯ ವಯಸ್ಸಿನಲ್ಲೆ ಸಂಸ್ಕಾರವನ್ನು ಕಲಿಯಬೇಕು. ತಂದೆ ತಾಯಿಯರ ಕಷ್ಟಗಳನ್ನು ಮಕ್ಕಳಾದವರು ಅರಿತು ನಡೆದು ಜೀವನದಲ್ಲಿ ಸಾಧನೆ ಮಾಡುವ ಮೂಲಕ ತಂದೆತಾಯಿಯರು ಪಟ್ಟ ಶ್ರಮಕ್ಕೆ ಒಂದು ಸಾರ್ಥಕತೆಯನ್ನು ತಂದುಕೊಡಬೇಕು ಎಂದರು.
ಅತಿಥಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಶುಭ ಕೋರಿದರು. ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಕಳೆದ ೬ ವರ್ಷಗಳಿಂದ ಉನ್ನತ ಸಾಧನೆಯನ್ನು ಮಾಡುತ್ತ ಬಂದಿದೆ. ವಿಜ್ಙಾನ ವಿಭಾಗದಲ್ಲಿ 100% ಫಲಿತಾಂಶದಾಖಲಾದದ್ದು ನಮಗೆಲ್ಲ ಸಂತಸದ ವಿಷಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಹಾಗೂ ಆಡಳಿತಾಧಿಕಾರಿ ಡಾ. ಕೆ.ಸಿ ನಾಕ್, ಶಕ್ತಿ ವಿದ್ಯಾ ಸಂಸ್ಥೆಯುಉತ್ತಮವಾದ ಫಲಿತಾಂಶವನ್ನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದಿದೆ. ಇದಿನ್ನೂಆರಂಭ ಇನ್ನು ಮುಂದಕ್ಕೆ ಸಾಕಷ್ಟು ಉತ್ತಮವಾದ ಫಲಿತಾಂಶ ನಮ್ಮ ವಿದ್ಯಾರ್ಥಿಗಳಿಂದ ಬರುವ ನಿರೀಕ್ಷೆಯಲ್ಲಿದ್ದೇವೆ. ಈ ಬಾರಿಉತ್ತಮ ಸಾಧನೆ ಮಾಡಿ ಶಕ್ತಿ ವಿದ್ಯಾ ಸಂಸ್ಥೆಯಗೌರವವನ್ನು ಹೆಚ್ಚಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೂ ಆ ದೇವರು ಒಳ್ಳೆಯದನ್ನು ಮಾಡಲಿ ಎಂದರು.
ನಂತರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿರಾಜ್ಯ ಮಟ್ಟದಲ್ಲಿ 95% ಕ್ಕಿಂತ ಅಧಿಕ ಅಂಕ ಪಡೆದು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಾಣಿಜ್ಯ ವಿಭಾಗದ ಅರ್ಚನ ಎನ್ ಕೆ ರಾಜ್ಯಕ್ಕೆ ೫ನೇ ರ್‍ಯಾಂಕ್ ಹಾಗೂ ವಿಜ್ಞಾನ ವಿಭಾಗದ ರೋಹಿತ್ ಕಲ್ಲುರಾಯ ರಾಜ್ಯಕ್ಕೆ 10ನೇ ರ್‍ಯಾಂಕ್ ಪಡೆದವರಿಗೆ ಸನ್ಮಾನ ಮಾಡಲಾಯಿತು ಹಾಗೂ 95% ಅಧಿಕ ಅಂಕ ಪಡೆ ನಿಹಾರಿಕ ಕೆ. ಅರ್, ಮೌನ ಜಿ, ದೇವಿಕಾ ಸಿ. ಪೈ, ಪ್ರತೀಕ್ಷಾ ಬಿ.ಪಿ, ಕಾವ್ಯ ಡಿ. ಮಾರ್‍ಲ, ಸ್ವಪ್ನ, ಕಾರ್ತಿಕ್ ಹೆಚ್‌ಎಸ್, ಮಿಥಾಲಿ ಆರ್‌ಅಮೀನ್, ಎನ್ ಹಿತೇಶ್‌ಕುಮಾರ್, ಪ್ರಥಮೇಶ್ ಶೆಣೈಕುಡ್ಪಿ, ವಂಶಿ ಹೆಚ್. ಆರ್, ಅನುರಾಗ್‌ಆರ್ ನಾಕ್, ಪ್ರಾಣೇಶ್ ವಿನಯ್‌ಕುಮಾರ್, ಆರ್‌ಅಮೃತ, ಜಯಂಕೃತ್ ಬಡಿಗರ್, ಸಂಜನಾರಾವ್, ಡಿ ರೋಶನ್‌ಗೌಡ, ಎನ್‌ಜೆ ಸಿಂಚನ, ಅಂಜುಎಸ್, ಸೃಷ್ಠಿ ಅವರಿಗೆ ಸನ್ಮಾನಿಸಲಾಯಿತು. ಶಕ್ತಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಹೆತ್ತವರನ್ನು ಡಾ ವೇದಿಕೆಗೆ ಆಮಂತ್ರಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಸುನಿಲ್ ಪಲ್ಲಮಜಲು ಕಾರ್ಯಕ್ರಮ ನಿರೂಪಿಸಿ, ಪ್ರಶಾಂತ್ ಕುಮಾರ್ ಸ್ವಾಗತಿಸಿ, ಸೂರ್ಯ ನಾರಯಣ ಭಟ್ ವಂದಿಸಿದರು.