Mangalore: ಸಿ.ಇ.ಟಿ. ಪ್ರಶ್ನೆಪತ್ರಿಕೆ ಗೊಂದಲ-ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಹರೀಶ್‌ ಆಚಾರ್ಯ ಆಗ್ರಹ

Mangalore: ಸಿ.ಇ.ಟಿ. ಪ್ರಶ್ನೆಪತ್ರಿಕೆ ಗೊಂದಲ-ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲು ಹರೀಶ್‌ ಆಚಾರ್ಯ ಆಗ್ರಹ

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಬಾರಿ ನಡೆಸಿದ ಸಿ.ಇ.ಟಿ. ಪ್ರಶ್ನೆಪತ್ರಿಕೆಗಳಲ್ಲಿ ಕೈಬಿಟ್ಟ ಪಠ್ಯದಿಂದಲೇ ಪ್ರಶ್ನೆಗಳು ಬಂದಿರುವುದು ಅತ್ಯಂತ ಗಂಭೀರವಾದ ವಿಚಾರವಾಗಿದೆ. 

ಇಲ್ಲಿ ಕೇವಲ ಒಂದು ವಿಷಯಗಳಲ್ಲಿ ತಪ್ಪಾಗಿರುವುದಲ್ಲ. ಎಲ್ಲಾ ನಾಲ್ಕು ಪರೀಕ್ಷೆಗಳ ವಿಷಯಗಳಲ್ಲಿ ಪಠ್ಯದಿಂದ ಹೊರತಾದ ಪ್ರಶ್ನೆಗಳು ಬಂದಿರುವುದನ್ನು ಕಂಡಾಗ ಯಾವುದೋ ದುರುದ್ದೇಶದಿಂದ ಕೂಡಿದ ಗಂಭೀರವಾದ ಕಾರಣಗಳು ಅಡಗಿರುವ ಸಾಧ್ಯತೆಗಳು ಇದೆ. ಆದುದ್ದರಿಂದ ರಾಜ್ಯ ಸರಕಾರವು ತಕ್ಷಣವೇ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಿ ವಿದ್ಯಾರ್ಥಿಗಳು, ಶೈಕ್ಷಣಿಕ ವ್ಯವಸ್ಥೆ ಮತ್ತು ಸಾರ್ವಜನಿಕರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬಗ್ಗೆ ವಿಶ್ವಾಸಾರ್ಹತೆಯನ್ನು ಮೂಡಿಸುವ ಕೆಲಸ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಡಾ. ಎಸ್‌.ಆರ್‌. ಹರೀಶ್‌ ಆಚಾರ್ಯ ಆಗ್ರಹಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿದ ಸಿ.ಇ.ಟಿ. ಪರೀಕ್ಷೆಯ ಪ್ರಶ್ನೆಪತ್ರಿಕೆಯ ಗೊಂದಲದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಹಜವಾಗಿ ಅನ್ಯಾಯ ಮಾಡಿದಂತಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನ ಮಾಡದೇ ಇರುವ ಪಠ್ಯದಿಂದ ಬಂದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅನಿವಾರ್ಯತೆಗೆ ವಿದ್ಯಾರ್ಥಿಗಳನ್ನು ನೂಕುವುದು ಅಸಂಮಂಜಸವಾಗಿದೆ. ಆದುದರಿಂದ ಅಂತಹ ವಿದ್ಯಾರ್ಥಿಗಳಿಗೆ ಪಠ್ಯದಿಂದ ಹೊರತಾದ ಎಲ್ಲಾ ಪ್ರಶ್ನೆಗಳಿಗೆ ಕೃಪಾಂಕವನ್ನು ನೀಡಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article