Moodubidire: ಎ.21ರಂದು ಮೂಡುಬಿದಿರೆಯಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

Moodubidire: ಎ.21ರಂದು ಮೂಡುಬಿದಿರೆಯಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ


ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆ ಭಗವಾನ್ ಶ್ರೀ ಮಹಾವೀರ ಸ್ಚಾಮಿ  2623ನೇಯ ಜನ್ಮಕಲ್ಯಾಣ ಸಮಿತಿ ಆಶ್ರಯದಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವು ಎ.21ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 8 ಗಂಟೆಗೆ ಮೂಡುಬಿದಿರೆ ಜೈನಮಠದಿಂದ  ಪ್ರಾರಂಭಗೊಂಡು ಬೇಟ್ಕೆರಿಯಲ್ಲಿರುವ ಶ್ರೀ ಮಹಾವೀರ ಸ್ಚಾಮಿ ಬಸದಿಗೆ ದೇವ, ಶಾಸ್ತ್ರ, ಗುರುಗಳ ಪಲ್ಲಕ್ಕಿ ಮೆರವಣಿಗೆ ಸಾಗಿಬರಲಿದೆ. ಬಸದಿಯಲ್ಲಿ  ಕ್ಷೀರಾಭಿಷೇಕ ನಡೆಯಲಿದೆ. ಬಳಿಕ ಶ್ರೀಮಹಾವೀರ ಭವನದವರೆಗೆ ಮೆರವಣಿಗೆ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ ಮಹಾವೀರಭವನದಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನಮಠದ ಸ್ಚಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಲಿರುವರು. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಬಿ.ಪಿ ಸಂಪತ್ ಕುಮಾರ್ ಮುಖ್ಯ ಅತಿಥಿಗಳಾಗಿರುವರು. ಬೆಳಗ್ಗೆ 10 ಗಂಟೆಯಿಂದ 1ರವರೆಗೆ ಜೈನ್ ಮೆಡಿಕಲ್ ಸೆಂಟರ್ನ ಡಾ.ಮಹಾವೀರ ಜೈನ್ ಸಂಯೋಜನೆಯಲ್ಲಿ ರಕ್ತದಾನ ಶಿಬಿರ, ಅಲಂಗಾರಿನಲ್ಲಿರುವ ಮೌಂಟ್ ರೋಸರಿ ಚಾರಿಟೇಬಲ್ ಟ್ರಸ್ಟ್ ವೃದ್ಧಾಶ್ರಮಕ್ಕೆ ಆಹಾರದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಶೈಲೇಂದ್ರ ಕುಮಾರ್, ಉಪಾಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಕಾರ್ಯದರ್ಶಿ ಅನಂತವೀರ ಜೈನ್, ಜೊತೆ ಕಾರ್ಯದರ್ಶಿ ದೀರೇಂದ್ರ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article