Mangalore: ಪ್ರಧಾನಿಗಳಿಗೆ ಅಟ್ಟೆ ಪ್ರಭಾವಳಿ: ಕಲ್ಕೂರ ಪರಿವಾರಕ್ಕೆ ಸಾರ್ಥಕತೆಯ ಭಾವ
Tuesday, April 16, 2024
ಮಂಗಳೂರು: ಪ್ರಧಾನಿ ನರೇಂದ್ರ ಮೋದೀಜಿಯವರು ಎಪ್ರಿಲ್ 14ರಂದು ಮಂಗಳೂರಿನಲ್ಲಿ ‘ರೋಡ್ ಶೋ’ ನಡೆಸಿದ ಸಂದರ್ಭ ತುಳುನಾಡಿನ ಸಾಂಪ್ರದಾಯಿಕ ‘ಅಟ್ಟೆಪ್ರಭಾವಳಿ’ಯ ಸಹಿತವಾಗಿ ಪಂಚಲೋಹದ ಕಡೆಗೋಲು ಕೃಷ್ಣನ ವಿಗ್ರಹವನ್ನು ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಧಾನಿಯವರಿಗೆ ನೀಡುವ ಮೂಲಕ ಸ್ವಾಗತಿಸಿದರು.
ಕಲ್ಕೂರ ಪ್ರತಿಷ್ಠಾನದಿಂದ ಆಚರಿಸಲ್ಪಡುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಸಂದರ್ಭ ಕಳೆದ ೪ ದಶಕಗಳಿಂದ ಸಾರ್ವಜನಿಕವಾಗಿ ಆರಾಧಿಸಲ್ಪಡುತ್ತಿದ್ದ ಪಂಚಲೋಹದ ಸುಮಾರು 7 ಇಂಚು ಎತ್ತರದ ಕಡೆಗೋಲು ಉಡುಪಿ ಶ್ರೀಕೃಷ್ಣನ ವಿಗ್ರಹ ಭಾರತದ ಪ್ರಧಾನಿ ಮೋದಿಯವರಿಗೆ ಸಮರ್ಪಿಸಿರುವ ಸಾರ್ಥಕತೆಯ ಭಾವ ಕಲ್ಕೂರ ಪರಿವಾರಕ್ಕೆ ಉಂಟಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.