Moodubidire: ಉದ್ಯಮಿ ಶಿವರಾಮ ಶೆಟ್ಟಿ ನಿಧನ
Saturday, April 27, 2024
ಮೂಡುಬಿದಿರೆ: ಆಳ್ವಾಸ್ ಕ್ಯಾಂಟೀನನ್ನು ಕಳೆದ ಮೂವತ್ತಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ವಾಮಂಜೂರು ಶಿವರಾಮ ಜೆ. ಶೆಟ್ಟಿ (72) ಅವರು ಶನಿವಾರ ನಿಧನ ಹೊಂದಿದರು.
ಶ್ರೀ ಮಹಾವೀರ ಕಾಲೇಜಿನ ಹಳೆವಿದ್ಯಾರ್ಥಿಯಾಗಿದ್ದ ಅವರು ಯಕ್ಷಗಾನಾದಿ ಕಲೆಗಳಲ್ಲಿ ಆಸಕ್ತರಾಗಿ ರಂಗವೇರಿದ್ದರು. ಶಿವರಾಮ ಶೆಟ್ಟಿ ಅವರು ವಾಮಂಜೂರು ಜಾಣು ಶೆಟ್ಟಿ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಆಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅವರು ಅಗಲಿದ್ದಾರೆ.