Moodubidire: ಮೂಡುಬಿದಿರೆ ಪಿಂಚಣಿದಾರರ ಸಂಘದ ಮಹಾಸಭೆ-ನೂತನ ಅಧ್ಯಕ್ಷರಾಗಿ ಟಿ.ಎನ್. ಕೆಂಬಾರೆ

Moodubidire: ಮೂಡುಬಿದಿರೆ ಪಿಂಚಣಿದಾರರ ಸಂಘದ ಮಹಾಸಭೆ-ನೂತನ ಅಧ್ಯಕ್ಷರಾಗಿ ಟಿ.ಎನ್. ಕೆಂಬಾರೆ


ಮೂಡುಬಿದಿರೆ: ಇಲ್ಲಿನ ತಾಲೂಕು ಪಿಂಚಣಿದಾರರ ಸಂಘ ಮೂಡುಬಿದಿರೆ ಇದರ ಮಹಾಸಭೆ ಸಂಘದ ಅಧ್ಯಕ್ಷ ರಾಜಾರಾಂ ನಾಗರಕಟ್ಟೆ ಇವರ ಅಧ್ಯಕ್ಷತೆಯಲ್ಲಿ ಶನಿವಾರ ಸಮಾಜ ಮಂದಿರದಲ್ಲಿ ನಡೆಯಿತು. 

ಮುಖ್ಯ ಅತಿಥಿಯಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ವಿಶ್ರಾಂತ ಶಿಕ್ಷಕ ವಿಠಲ ಬೇಲಾಡಿ ಮಾತನಾಡಿ, ಜೀವನೋತ್ಸಾಹದ ಬದುಕು ನಮ್ಮದಾಗಬೇಕು. ನಗುವ, ನಗಿಸುವ, ನಗಿಸಿ ನಗುತ ಬಾಳುವ ಮನೋಭಾವ ನಮ್ಮೆಲ್ಲರದ್ದಾಗಲಿ ಎಂದು ಹೇಳಿದರು.

ಪತ್ರಕರ್ತ ಗಣೇಶ ಕಾಮತ್ ಅವರು ತಮ್ಮ ಗುರುಗಳೂ ಆಗಿರುವ ದಿ. ಮಹಾಬಲ ಭಂಡಾರಿ ಅವರ ಸಂಸ್ಮರಣಾ ಮಾತುಗಳನ್ನಾಡಿದರು.

ಕಾರ್ಯದರ್ಶಿ ಎಲ್.ಜೆ. ಫೆರ್ನಾಂಡೀಸ್ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡಿಸಿದರು.

ಸದಾನಂದ ನಾರಾವಿ ಸ್ವಾಗತಿಸಿದರು. ಉಪಾಧ್ಯಕ್ಷ ಟಿ.ಎನ್. ಕೆಂಬಾರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸಂಘದ ನಿಕಟಪೂರ್ವ ಅಧ್ಯಕ್ಷ ಗುಣಪಾಲ ಹೆಗ್ಡೆ ಅವರು ಮುಂದಿನ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಟಿ.ಎನ್. ಕೆಂಬಾರೆ, ಪ್ರೇಮಾ ಸಿ. ರಾವ್ (ಉಪಾಧ್ಯಕ್ಷರು) ಎಲ್.ಜೆ. ಫೆರ್ನಾಂಡಿಸ್ (ಕಾರ್ಯದರ್ಶಿ) ಜಾನಕಿ ಶ್ರೀಧರ್ ( ಸಹಕಾರ್ಯದರ್ಶಿ) ರಾಜೀವ್ ಎಸ್. (ಕೋಶಾಧಿಕಾರಿ) ರಾಜಾರಾಂ ನಾಗರಕಟ್ಟೆ(ನಿಕಟಪೂರ್ವ ಅಧ್ಯಕ್ಷ)ರಾಗಿ ಆಯ್ಕೆ ಮಾಡಲಾಯಿತು.

ಮೊದಲಿಗೆ ಸಂಘದ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article