Moodubidire: ಆಳ್ವಾಸ್ ನಲ್ಲಿ 'ದೈನಂದಿನ ಜೀವನದಲ್ಲಿ ಮನೋವಿಜ್ಞಾನ' ಉಪನ್ಯಾಸ

Moodubidire: ಆಳ್ವಾಸ್ ನಲ್ಲಿ 'ದೈನಂದಿನ ಜೀವನದಲ್ಲಿ ಮನೋವಿಜ್ಞಾನ' ಉಪನ್ಯಾಸ


ಮೂಡುಬಿದಿರೆ: ಮೂಡುಬಿದಿರೆ ಪ್ರೆಸ್‌ಕ್ಲಬ್ (ರಿ),  ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ  ಹಾಗೂ ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಖ್ಯಾತ ಮನಃಶಾಸ್ತ್ರಜ್ಞ, ಅಂತರಾಷ್ಟ್ರೀಯ ಪ್ರಮಾಣಿಕೃತ ಆಪ್ತ ಸಲಹೆಗಾರ ನವೀನ್ ಎಲ್ಲಂಗಳ  ಅವರು ಆಳ್ವಾಸ್ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ  'ದೈನಂದಿನ ಜೀವನದಲ್ಲಿ ಮನೋವಿಜ್ಞಾನ' ಎಂಬ ವಿಚಾರದಲ್ಲಿ ಗುರುವಾರ ವಿಶೇಷ ಉಪನ್ಯಾಸ ನೀಡಿದರು.

ಮನಸ್ಸನ್ನು ಅರಿತು ಸಕರಾತ್ಮಕ ಚಿಂತನೆ ಬೆಳೆಸಿಕೊಂಡು ಜೀವನವನ್ನು ಸಮೃದ್ಧಗೊಳಿಸಬೇಕು ಎಂದು ಸಲಹೆಯಿತ್ತರು.  ನಮ್ಮನ್ನು ನಾವು ಪ್ರೀತಿಸದ ಹೊರತು ಜೀವನ ಉದ್ಧಾರ ಸಾಧ್ಯವಿಲ್ಲ ಎಂದ ಅವರು ಭಾರತೀಯ ಸಂಸ್ಕೃತಿಯಲ್ಲಿ ವಿಜ್ಞಾನ ಮನೋವಿಜ್ಞಾನಕ್ಕೆ ಹೆಚ್ಚಿನ ಪ್ರಾಶಸ್ಯವಿತ್ತು ಎಂದರು.

ಆಳ್ವಾಸ್ ಸಂಸ್ಥೆಯ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಸಭಾ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಮಹತ್ತದ್ದು ಎಂದು ಹೇಳಿದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಯಶೋದರ ವಿ. ಬಂಗೇರ ಸಭಾಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹರೀಶ್ ಕೆ. ಆದೂರು ಸ್ವಾಗತಿಸಿದರು. ಉಪನ್ಯಾಸಕ ಪ್ರಸಾದ್ ಶೆಟ್ಟಿ ವಂದಿಸಿ, ವಿದ್ಯಾರ್ಥಿ ಪ್ರಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article