Udupi: ಎ.19:ಉಡುಪಿಗೆ ವಿದೇಶಾಂಗ ಸಚಿವ ಜೈಶಂಕರ್
Wednesday, April 17, 2024
ಉಡುಪಿ: ದೇಶದ ವಿದೇಶಾಂಗ ನೀತಿಗಳಲ್ಲಿ ಮಹತ್ವದ ಸುಧಾರಣೆ ತಂದಿರುವ ಮತ್ತು ತನ್ನ ನೇರ ನಡೆ ನುಡಿಗಳಿಂದ ವಿಶ್ವಾದ್ಯಂತ ಮನೆ ಮಾತಾಗಿರುವ ವಿದೇಶಾಂಗ ಸಚಿವ ಜೈಶಂಕರ್ ಎ. 19ರಂದು ಉಡುಪಿಗೆ ಆಗಮಿಸುವರು.
ಅಂದು ಅಪರಾಹ್ನ ೩.೩೦ಕ್ಕೆ ಸರಿಯಾಗಿ ನಗರದ ಹೋಟೆಲ್ ಕಿದಿಯೂರ್ ಮಾಧವ ಕೃಷ್ಣ ಸಭಾಂಗಣದಲ್ಲಿ ಕೂರ್ಮ ಫೌಂಡೇಶನ್ ವತಿಯಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ. ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿ ಆಡಳಿತದಲ್ಲಿ ನಡೆದಿರುವ ವಿದೇಶಾಂಗ ನೀತಿಗಳು ಮತ್ತು ರಾಜತಾಂತ್ರಿಕ ಸುಧಾರಣೆಗಳ ಬಗ್ಗೆ ಈ ಸಂವಾದ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಸಂವಾದದ ಕೊನೆಯಲ್ಲಿ ಸಾರ್ವಜನಿಕರಿಗೆ ಸಚಿವರೊಂದಿಗೆ ಪ್ರಶ್ನೋತ್ತರಕ್ಕೆ ಅವಕಾಶವಿದೆ.