Udupi: ಮತದಾನ ಮಾಡಿ ಕೊನೆಯುಸಿರೆಳೆದ ವೃದ್ಧೆ
Wednesday, April 17, 2024
ಉಡುಪಿ: ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಕೊನೆಯುಸಿರೆಳೆದ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿ ನಡೆದಿದೆ.
ಪಾಂಡೇಶ್ವರ ಚಡಗರ ಅಗ್ರಹಾರ ನಿವಾಸಿ ಪಿ. ಯಶೋದಮ್ಮ ನಾರಾಯಣ ಉಪಾಧ್ಯ (83) ಮೃತಪಟ್ಟವರು.
ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿರುವ ಮನೆಯಿಂದ ಮತ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು. ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ಯಶೋದಾ ನಿಧನರಾದರು.
ಮತದಾನಕ್ಕೂ ಮುನ್ನ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಆದರೆ, ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು. ರಾತ್ರಿ ೯ ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋದಮ್ಮ ಮೃತಪಟ್ಟರು.
ಮೃತರು ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.