Udupi: 2 ಲಕ್ಷ ರೂ. ಮೊತ್ತದ ದೇಣಿಗೆ ಹಸ್ತಾಂತರ
Sunday, April 14, 2024
ಉಡುಪಿ: ಇಲ್ಲಿನ ಶಿವಳ್ಳಿ ಗ್ರಾಮದ ಕಕ್ಕುಂಜೆ ಶ್ರೀ ಕಟ್ಟೆ ಮಹಾದೇವಿ ಅಮ್ಮನವರ ದೇವಸ್ಥಾನ ಹಾಗೂ ಕುಕ್ಕಿಕಟ್ಟೆ ಕುದ್ರುಚಾವಡಿ ಪಂಚ ಧೂಮಾವತಿ ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 2 ಲಕ್ಷ ರೂ.ಮೊತ್ತದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಹಾಗೂ ಯೋಜನಾಧಿಕಾರಿ ರಾಮ. ಎಂ. ಮೇಲ್ವಿಚಾರಕಿ ಪವಿತ್ರ, ಸೇವಾ ಪ್ರತಿನಿಧಿ ರೇಣುಕ, ಒಕ್ಕೂಟದ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ವಾಸು. ಎಸ್., ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ತಾರಾನಾಥ ಪೂಜಾರಿ, ಕಾರ್ಯದರ್ಶಿ ಸುರೇಶ್ ಸುವರ್ಣ, ಕೋಶಾಧಿಕಾರಿ ಭಾಸ್ಕರ್ ಡಿ. ಸುವರ್ಣ, ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.