Ullal: ಕಿನ್ಯ, ಬೆಳರಿಂಗೆಯಲ್ಲಿ ಕೈಕೊಟ್ಟ ಇವಿಎಮ್, ಒಂದು ತಾಸು ಮತದಾನ ರದ್ದು
Saturday, April 27, 2024
ಉಳ್ಳಾಲ: ಉಳ್ಳಾಲ ತಾಲೂಕಿನ ಕಿನ್ಯ ಗ್ರಾಮದ ಬೆಳರಿಂಗೆ ಸರಕಾರಿ ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ 175 ರ ಇವಿಎಮ್ ಕೈಕೊಟ್ಟ ಪರಿಣಾಮ ಒಂದು ತಾಸುಗಳ ಕಾಲ ಮತದಾನ ರದ್ದಾದ ಘಟನೆ ನಡೆದಿದೆ.
ಬೆಳರಿಂಗೆ ಶಾಲೆ ಮತಗಟ್ಟೆಯ ಬೂತ್ ಸಂಖ್ಯೆ 175 ರ ಇವಿಎಮ್‌ನಲ್ಲಿ ಶುಕ್ರವಾರ ಸಂಜೆ ೩ ಗಂಟೆ ವೇಳೆ ಸಮಸ್ಯೆ ಕಂಡು ಬಂದಿದೆ.ಸುಮಾರು ಒಂದು ಗಂಟೆಯ ಕಾಲ ಮತದಾನ ಸ್ಥಗಿತಗೊಂಡು ಮತದಾರರು ಉರಿ ಬಿಸಿಲ ಬೇಗೆಗೆ ಸರತಿ ಸಾಲಲ್ಲಿ ಕಾಯುವಂತಾಯಿತು.ಬಳಿಕ ಚುನಾವಣಾಧಿಕಾರಿಗಳು ತ್ವರಿತವಾಗಿ ಬದಲಿ ಇವಿಎಮ್ ವ್ಯವಸ್ಥೆ ಕಲ್ಪಿಸಿದ್ದು ಮತ್ತೆ ಮತದಾನ ಪ್ರಕ್ರಿಯೆಯು ಸಾಂಗವಾಗಿ ನಡೆಯಿತು.