Karkala: ಕುದುರೆ ಏರಿ ಬಂದು ಮತದಾನ ಮಾಡಿದ ಯುವಕ
Saturday, April 27, 2024
ಕಾರ್ಕಳ: ಯುವಕನೊಬ್ಬ ಕುದುರೆ ಏರಿ ಬಂದು ಮತದಾನ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದ ಘಟನೆ ಇಂದು ಕಾರ್ಕಳದಲ್ಲಿ ನಡೆಯಿತು.
ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಜೇಷ್ಠ ಪುತ್ರ ಏಕಲವ್ಯ ಆರ್. ಕಟೀಲ್ ಇಂದು ತಾನು ಸಾಕಿದ ಕುದುರೆಯನ್ನು ಏರಿ ಬೂತ್ ನಂ 87 ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಬಂದು ಮತ ಚಲಾಯಿಸುದರ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದರು. ಆ ಸಂದರ್ಭದಲ್ಲಿ ಬೂತ್‌ನಲ್ಲಿ ಇದ್ದ ಪಕ್ಷದ ಕಾರ್ಯಕರ್ತರು ಅವರ ಜೊತೆ ಪೋಟೋ ಕ್ಲಿಕಿಸಿ ಖುಷಿಪಟ್ಟರು.
