Kundapura: ಗ್ರಹ ಚೇತನ ಯೋಜನೆಯಡಿ 80,000 ಆರ್ಥಿಕ ನೆರವು

Kundapura: ಗ್ರಹ ಚೇತನ ಯೋಜನೆಯಡಿ 80,000 ಆರ್ಥಿಕ ನೆರವು


ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ಗ್ರಹ ಚೇತನ ಯೋಜನೆಯಡಿ ಆಯ್ಕೆಯಾದ ಕುಂದಾಪುರ ತಾಲೂಕು ಕಮಲಶಿಲೆ ಗ್ರಾಮದ ಶ್ರೀಮತಿ ಸ್ವಾತಿ ಶೆಟ್ಟಿ ಇವರಿಗೆ ಸಂಘದ ದಶಮ ಸಂಭ್ರಮದ ಮಹಾಪೋಷಕ ಎಚ್. ಚಂದ್ರ ಶೆಟ್ಟಿ ಹೋಟೆಲ್ ಉದ್ಯಮಿ ಹೈದ್ರಾಬಾದ್ ಇವರ ಶಿಫಾರಸಿನ ಮೇರೆಗೆ 50,000 ರೂ. ಹಣವನ್ನು ಹಾಗೂ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ದಬ್ಬೆಕಟ್ಟೆ ನಿವಾಸಿ ಕುಸುಮ ಶೆಟ್ಟಿ ಇವರಿಗೆ ಸಂಘದ ದಶಮ ಸಂಭ್ರಮದ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿಗಳಾದ ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಅವರ ಶಿಫಾರಸ್ಸಿನ ಮೇರೆಗೆ ಸಂಘದ ವತಿಯಿಂದ 30,000 ರೂ. ಹಣವನ್ನು ಚೆಕ್ ಮೂಲಕ ಹಸ್ತಾಂತರಿಸಲಾಯಿತು. 

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ. ಉದಯ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಮಹಾ ಪೋಷಕರಾದ ಹೈದರಾಬಾದ್ ಹೋಟೆಲ್ ಉದ್ಯಮಿ ಹೆಚ್. ಚಂದ್ರ ಶೆಟ್ಟಿ, ಪೋಷಕರಾದ ಅಲ್ತಾರು ಸುಧಾಕರ ಶೆಟ್ಟಿ, ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್  ಶೆಟ್ಟಿ ಬಸ್ರೂರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article