
Mangalore: ಜೂ.1ರಂದು ಮಂಗಳೂರು ಮ್ಯಾರಥಾನ್‌ಗೆ ಚಾಲನೆ
ಮಂಗಳೂರು: ಮಂಗಳೂರು ರನ್ನರ್ಸ್ ಕ್ಲಬ್ ವತಿಯಿಂದ ನಿವೇಯಸ್ ಮಂಗಳೂರು ಮ್ಯಾರಥಾನ್ 2024 ಅಧಿಕೃತವಾಗಿ ಜೂ. 1ರಂದು ಪ್ರಾರಂಭಗೊಳ್ಳಲಿದೆ ಎಂದು ನಿವೇಯಸ್ ಮಂಗಳೂರು ಮ್ಯಾರಥಾನ್‌ನ ನಿರ್ದೇಶಕ ಅಭಿಲಾಶ್ ಡೊಮಿನಿಕ್ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮ್ಯಾರಥಾನ್ ನ.10ರಂದು ಮಂಗಳ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಜೂ.೧ರಂದು ಸಂಜೆ ೫:೩೦ಕ್ಕೆ ಪಾಂಡೇಶ್ವರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿ ಅಧಿಕೃತವಾಗಿ ಮಂಗಳೂರು ಮ್ಯಾರಥಾನ್‌ಗೆ ಚಾಲನೆ ನೀಡಲಾಗುವುದು ಮುಖ್ಯ ಅತಿಥಿಯಾಗಿ ತುಳು ನಟ ಅರವಿಂದ್ ಬೋಳಾರ್ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಭಾಗವಹಿಸುವರು
ನಿವೇಯಸ್ ಮಂಗಳೂರು ಮ್ಯಾರಥಾನ್ ಅತಿದೊಡ್ಡ ಮ್ಯಾರಥಾನ್ ಆಗಿದ್ದು , ಫುಲ್ ಮ್ಯಾರಥಾನ್, 20 ಮೈಲರ್( 32.18 ಕಿ.ಮೀ), ಹಾಫ್ ಮ್ಯಾರಥಾನ್ 10 ಕಿ.ಮೀ , 5ಕಿ.ಮೀ ಮತ್ತು ಗಮ್ಮತ್ ರನ್ (2 ಕಿ.ಮೀ) ವಿಭಾಗಗಳಲ್ಲಿ ನಡೆಯಲಿದೆ. ಪ್ರತಿವರ್ಷ ಅತಿ ಹೆಚ್ಚು ಮಂದಿ ಭಾಗವಹಿಸುವ ಈ ಮ್ಯಾರಥಾನ್ನಲ್ಲಿ ಈ ವರ್ಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರಯ ೫ ಸಾವಿರ ಅತ್ಲಿಟ್‌ಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದುತಿಳಿಸಿದರು.
ಮಂಗಳೂರು ರನ್ನರ್ ಕ್ಲಬ್ ಕಾರ್ಯದರ್ಶಿ ಅಮರ್ ಕಾಮತ್, ನಿವೇಯೂಸ್ ಮಂಗಳೂರು ಮ್ಯಾರಥಾನ್ ಲೀಡ್ ಮೀಡಿಯಾ ಹಾಗೂ ಕಮ್ಯುನಿಕೇಷನ್ಸ್ ಪ್ರಾಚಿ ಕಾಮತ್ ಉಪಸ್ಥಿತರಿದ್ದರು.