Mangalore: ನೀರಿನ ಸಮಸ್ಯೆ ಹೆಚ್ಚಳ- ಮೇ.5ರಿಂದ ರೇಶನಿಂಗ್

Mangalore: ನೀರಿನ ಸಮಸ್ಯೆ ಹೆಚ್ಚಳ- ಮೇ.5ರಿಂದ ರೇಶನಿಂಗ್

ಮಂಗಳೂರು: ನೇತ್ರಾವತಿ ನದಿಯ ನೀರಿನ ಒಳಹರಿವು ನಿಂತಿರುವುದರಿಂದ ಮತ್ತು ಬೇಸಿಗೆಯ ಬಿರು ಬಿಸಿಲಿನಿಂದಾಗಿ ಮಂಗಳೂರು ಮಹಾ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದರಿಂದ ಮೇ 5ರಿಂದ ನೀರಿನ ರೇಶನಿಂಗ್ ಆರಂಭಿಸಲಾಗುವುದು ಎಂದು ಮನಪಾ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಲಭ್ಯವಿರುವ ನೀರನ್ನು ಮಂಗಳೂರು ನಗರ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ಬಿಡಲು ಕ್ರಮ ವಹಿಸಲಾಗಿದೆ. 

ಅದರಂತೆ ಮೇ 5ರಿಂದ ಬೆಸ ದಿನಗಳಲ್ಲಿ ಬೆಂದೂರು ಸ್ಥಾವರದಿಂದ ಕೋರ್ಟ್ ಪ್ರದೇಶ, ರಥಬೀದಿ, ಬಾವುಟಗುಡ್ಡ, ಆಕಾಶವಾಣಿ, ಪದವು, ಗೋರಿಗುಡ್ಡ, ಸೂಟರ್‌ಪೇಟೆ, ಶಿವಬಾಗ್, ಕದ್ರಿ, ವಾಸ್‌ಲೇನ್, ಬೆಂದೂರು, ಲೋವರ್ ಬೆಂದೂರು, ಕುದ್ರೋಳಿ, ಕೋಡಿಯಾಲ್ ಬೈಲ್ ಮತ್ತು ಪಡೀಲ್ ಸ್ಥಾವರದಿಂದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡ, ವೆಲೆನ್ಸಿಯಾ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್‌ನಗರ, ಬಜಾಲ್, ತಿರುವೈಲು, ವಾಮಂಜೂರು ಹಾಗೂ ಶಕ್ತಿನಗರ ಟ್ಯಾಂಕ್‌ನಿಂದ ಕುಂಜತ್ತಬೈಲ್, ಮೊಗ್ರೊಡಿ, ಶಕ್ತಿನಗರ, ಸಂಜಯನಗರ, ಪ್ರೀತಿನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿ ನಗರ, ಶಾಂತಿನಗರ, ಕಾವೂರು ಮತ್ತು ತುಂಬೆ-ಪಣಂಬೂರು ನೇರ ಲೈನ್ನಿಂದ ಕಂಕನಾಡಿ, ನಾಗುರಿ, ಪಂಪ್ವೆಲ್, ಬಳ್ಳೂರುಗುಡ್ಡೆ, ಪಡೀಲ್‌ಗೆ ನೀರು ಪೂರೈಕೆ ಮಾಡಲಾಗುವುದು. 

ಮೇ 6ರಿಂದ ಪಣಂಬೂರು ಸ್ಥಾವರದಿಂದ ಸುರತ್ಕಲ್, ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ ಮತ್ತು ಪಡೀಲ್ ಸ್ಥಾವರದಿಂದ ಬಜಾಲ್, ಜಲ್ಲಿಗುಡ್ಡ, ಮುಗೇರ್, ಎಕ್ಕೂರು, ಸದಾಶಿವ ನಗರ, ಅಳಪೆ, ಮೇಘ ನಗರ, ಮಂಜಳಿಕೆ, ಕಂಕನಾಡಿ ರೈಲ್ವೆ ಸ್ಟೇಷನ್, ಕುಡುಪು, ಪಾಂಡೇಶ್ವರ, ಸ್ಟೇಟ್ ಬ್ಯಾಂಕ್, ಗೂಡ್ಸ್ಶೆಡ್, ಬಂದರ್ ದಕ್ಕೆ, ಕಣ್ಣೂರು, ನಿಡ್ಡೆಲ್, ಶಿವನಗರ. ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರನಗದ ಹಾಗೂ ಶಕ್ತಿನಗರ ಟ್ಯಾಂಕ್ನಿಂದ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕೆಬೆಟ್ಟು, ಸಿಲ್ವರ್ ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ ಮತ್ತು ತುಂಬೆ-ಪಣಂಬೂರು ನೇರ ಲೈನ್‌ನಿಂದ ಮುಡಾ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲ್ಕಾಡ್, ಬಂಗ್ರ ಕೂಳೂರುಗೆ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಕಟ್ಟಡ ರಚನೆ ಮತ್ತಿತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್‌ಗಳ ಜೋಡಣೆ ಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡು ವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸುವುದು ಎಂದು ಎಚ್ಚರಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯಾದರೆ ದೂ.ಸಂ: ಪಡೀಲ್ ರೇಚಕ ಸ್ಥಾವರ-00824-2230840/ 2220303/ 2220362 ಮತ್ತು ಪಣಂಬೂರು ರೇಚಕ ಸ್ಥಾವರ-0824-2220364 ಹಾಗೂ ಮನಪಾ ವಾಟ್ಸ್‌ಆಪ್ ಸಂಖ್ಯೆ 9449007722/ಮನಪಾ ಕಂಟ್ರೋಲ್ ರೂಮ್- 0824-2220319/2220306ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article