Karkala: ಮತ್ತೆ ವಿವಾದದ ಸುಳಿಯಲ್ಲಿ ಪರಶುರಾಮ ಮೂರ್ತಿ
ಕಾರ್ಕಳ: ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಬೈಲೂರು ಉಮಿಕಲ್ ಗುಡ್ಡದ ಮೇಲೆ ನಿಂತಿರುವ ಕಂಚಿನ ಪರಶುರಾಮ ಮೂರ್ತಿಯ ಮೇಲ್ಭಾಗ ಫೈಬರ್ ಗ್ಲಾಸ್ ಎಂದು ಹಾಗೂ ರಾತ್ರೋ ರಾತ್ರಿ ಮೂರ್ತಿಯ ಮೇಲ್ಭಾಗವನ್ನು ತೆಗೆದು ಬೇರೆಡೆಗೆ ಸಾಗಿಸಲಾಗಿತ್ತು. ಕಂಚಿನ ನಕಲಿ ಮೂರ್ತಿಯ ಅರ್ಧ ಭಾಗವನ್ನು ಈ ಹಿಂದೆ ತೆರವುಗೊಳಿಸಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿತ್ತು.
ಕಾಂಗ್ರೆಸ್ಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸರಣಿ ಪ್ರತಿಭಟನೆ, ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ನೀಡಿದ ವರದಿಯ ಪರಿಣಾಮ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಓಡಿಗೆ ವಹಿಸಿತ್ತು
ನಿನ್ನೆಯಿಂದ ಮೂರ್ತಿಯ ಉಳಿದ ಭಾಗವನ್ನು ತೆರವುಗೊಳಿಸುವ ಕಾರ್ಯ ಪ್ರಾರಂಭವಾಗಿದ್ದು ಮೂರ್ತಿಯನ್ನು ತೆರವುಗೊಳಿಸಲು ಅಟ್ಟಳಿಗೆಯನ್ನು ಹಾಕಲಾಗುತ್ತಿದೆ ಹಾಗೂ ಉಮ್ಮಿಕಲ್ ಬೆಟ್ಟಕ್ಕೆ ಪೊಲೀಸ್ ಪಹರೆಯೊಂದಿಗೆ ಸಾರ್ವಜನಿಕರಿಗೆ ಬೆಟ್ಟದ ಮೇಲೆ ಹೋಗಲು ಅನುಮತಿ ನೀಡದೆ ತೆರೆಮರೆಯಲ್ಲಿ ತೆರವು ಗೊಳಿಸುವ ಕಾರ್ಯ ನಡೆಯುತ್ತಿದೆ ಎಂಬ ದೂರುಗಳು ಬರುತ್ತಿವೆ
ಸಿಓಡಿ ತನಿಖೆಯ ಸಂದರ್ಭದಲ್ಲಿ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಉಳಿದ ಸಾಕ್ಷಿಯನ್ನು ಕೂಡ ನಾಶಪಡಿಸುವ ಹುನ್ನಾರವಾಗಿದೆ ನಿರ್ಮಿತಿ ಕೇಂದ್ರದ ಮೂಲಕ ನ್ಯಾಯಾಲಯದ ನಿರ್ದೇಶನ ಇದೆ ಎಂಬ ಸುಳ್ಳು ಮಾಹಿತಿ ನೀಡಿ ಮೂರ್ತಿಯ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದೆ.
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ಸಿಓಡಿ ತನಿಖೆಗೆ ಆದೇಶ ಮಾಡಿರುತ್ತಾರೆ. ಮತ್ತು ನಾಗಮೋಹನ್ ದಾಸ್ ವಿಚಾರಣಾ ಆಯೋಗವು ತನಿಖೆಯನ್ನು ನೆಡೆಸುತ್ತಿದೆ ಹೀಗಿರುವಾಗ ಪರಶುರಾಮ ಮೂರ್ತಿಯನ್ನು ಉSಖಿ ವಂಚನೆ ಮತ್ತು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದುದನ್ನು ಮುಚ್ಚಿ ಹಾಕುವ ಪ್ರಯತ್ನವಾಗಿದ್ದು ಇದರ ಬಗ್ಗೆ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ಹೋರಾಟವನ್ನು ನೆಡೆಸುತ್ತೆವೆ ಎಂದು ಕಾಂಗ್ರೆಸ್ ಮುಖಂಡರು ಶೆಟ್ಟಿ ಹೇಳುತ್ತಿದ್ದರೆ ಬಿಜೆಪಿ ನಾಯಕರು ಹೈಕೋರ್ಟ್ ಆದೇಶದಂತೆ ಕೆಲಸ ಕಾರ್ಯ ಪ್ರಾರಂಭವಾಗಿದೆ ಎನ್ನುತ್ತಿದ್ದಾರೆ ಒಟ್ಟಿನಲ್ಲಿ ಮೊದಲಿನಿಂದಲೂ ವಿವಾದಾಸ್ಪದವಾಗಿ ಮೇಲೇರಿದ ಪರಶುರಾಮ ಮೂರ್ತಿ ಮತ್ತೊಮ್ಮೆ ರಾಜಕೀಯದ
ವಿವಾದದ ಸುಳಿಯಲ್ಲಿ ಸಿಲುಕುವ ಲಕ್ಷಣಗಳು ಕಂಡು ಬರುತ್ತಿವೆ.