Mangalore: ರಾಜ್ಯಾದ್ಯಂತ ಶಾಲಾರಂಭ-ಸಕಲ ಸಿದ್ಧತೆ

Mangalore: ರಾಜ್ಯಾದ್ಯಂತ ಶಾಲಾರಂಭ-ಸಕಲ ಸಿದ್ಧತೆ


ಮಂಗಳೂರು: ಜಿಲ್ಲೆಯಲ್ಲಿ  ಶಾಲೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಆಗಮನಕ್ಕೂ ಮುನ್ನ ಶಾಲೆಗನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಲಾಗಿದೆ. 

ಸರಕಾರಿ, ಖಾಸಗಿ ಅನುದಾನಿತ ಸೇರಿದಂತೆ ಜಿಲ್ಲೆಯ 1781 ಶಾಲೆಗಳನ್ನು ವಿದ್ಯಾರ್ಥಿಗಳ ಆಗಮನಕ್ಕಾಗಿ ಅಣಿಗೊಳಿಸಲಾಗಿದೆ ದೆ. ಮೇ 31ರಂದು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಲಿದ್ದಾರೆ. ಅವರಿಗೆ ಸಿಹಿ ತಿಂಡಿ ನೀಡಿ ಶಾಲಾ ಪ್ರಾರಂಭೋ ತ್ಸವವನ್ನು ಆಚರಿಸಲು ಶಿಕ್ಷಣ ಇಲಾಖೆಯು ಈಗಾಗಲೇ ಶಾಲೆಗಳಿಗೆ ಸೂಚನೆ ನೀಡಿದೆ. 

ಶಾಲಾ ಕೋಣೆಗಳ ಸ್ವಚ್ಛತೆಯ ಜೊತೆಗೆ, ಬಿಸಿಯೂಟದ ಅಡುಗೆ ಕೋಣೆ, ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛತೆಗೊಳಿಸುವ ಕಾರ್ಯದ ಕಡೆಗೆ ಗಮನ ಹರಿಸುವಂತೆ ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಆ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ. 

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಸುಗಮ ಸಂಚಾರದ ಬಗ್ಗೆ ಚರ್ಚಿಸಲು ಈಗಾಗಲೇ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುವಾಗ ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿ ಕರ್ನಾಟಕ ಮೋಟಾರ್ ವಾಹನಗಳ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೂಚಿಸಿದ್ದಾರೆ. 

ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ದಿನವೂ ಆಗಾಗ ಮಳೆಯಾಗುತ್ತಿದೆ. ಆದರೆ ಈ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ನಿವಾರಣೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಶಾಲೆಗಳಿಗೆ ಗ್ರಾಮ ಪಂಚಾಯತ್ನಿಂದ ಟ್ಯಾಂಕರ್ ಮೂಲಕ ನೀರಿನ ಸರಬರಾಜು ಮಾಡಲಾಗುತ್ತಿದೆ. 

ಶಾಲಾರಂಭದ ದಿನವೇ ಸಮವಸ್ತ್ರ ವಿತರಣೆಗೆ ಇಲಾಖೆ ಸೂಚನೆ ನೀಡಿದ್ದು, ಜಿಲ್ಲೆಯಲ್ಲಿ ಈಗಾಗಲೇ ಶಾಲಾ ಸಮವಸ್ತ್ರಗಳು ತಲುಪಿದೆ. ಉಚಿತ ಪಠ್ಯಪುಸ್ತಕ ಎಲ್ಲ ಶಾಲೆಗಳಿಗೂ ತಲುಪಲಿವೆ.

ಈ ವರ್ಷ ವಿದ್ಯಾರ್ಥಿನಿಯರ ಸಮವಸ್ತ್ರದಲ್ಲಿ ಬದಲಾವಣೆ ಇದೆ. ಈ ಹಿಂದೆ 8ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಮಾತ್ರ ಚೂಡಿದಾರ ಸಮವಸ್ತ್ರ ಸೌಲಭ್ಯ ಇತ್ತು. ಈ ಬಾರಿ ೬ನೇ ತರಗತಿಯಿಂದಲೇ ವಿದ್ಯಾರ್ಥಿನಿಯರಗೆ ಈ ಸೌಲಭ್ಯ ದೊರೆಯಲಿದೆ. ಎರಡು ಜೊತೆ ಸಮವಸ್ತ್ರ ಮೊದಲ ದಿನವೇ ಮಕ್ಕಳಿಗೆ ದೊರೆಯಲಿದೆ. ಅಲ್ಲದೆ ಮೊದಲ ದಿನವೇ ಬಿಸಿಯೂಟದ ಸೌಲಭ್ಯ ಇರುತ್ತದೆ. 

ಶಾಲೆ ಪ್ರಾರಂಭವಾಗುತ್ತಿದ್ದರೂ, ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಕೊರತೆ ನಿವಾರಿಸಲು ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗೆ 1079 ಮತ್ತು ಪ್ರೌಢ ಶಾಲೆಗೆ 219 ಗೌರವ ಶಿಕ್ಷಕರ ನೇಮಕಾತಿಗೆ ಈಗಾಗಲೇ ಜಿಲ್ಲಾ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article