
Mangalore: ಮಂಗಳೂರಿನಲ್ಲಿ ಮತ ಎಣಿಕೆಗೆ ಭರದ ಸಿದ್ಧತೆ
Friday, May 31, 2024
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತತಣಿಕೆ ಜೂ.4 ರಂದು ನಡೆಯಲಿದ್ದು, ಮತ ಎಣಿಕೆಗೆ ಜಿಲ್ಲಾ ಚುನಾವಣಾ ಆಯೋಗದಿಂದ ಭರದ ಸಿದ್ದತೆ ನಡೆದಿದೆ.
ಏ.26 ರಂದು ನಡೆದಿದ್ದ ಚುನಾವಣೆಯಲ್ಲಿ ದ.ಕ ಲೀಕಸಭಾ ಕ್ಷೇತ್ರದ 9 ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಭದ್ರವಾಗಿದ್ದು, ಆ ಯಂತ್ರಗಳನ್ನು ಹಾಗೂ ಅಂಚೆಮತಪತ್ರಗಳನ್ನು ಒಳಗೊಂಡ ಮತಪೆಟ್ಟಿಗೆಗಳು ಸುರತ್ಕಲ್ ಎನ್ ಐಟಿಕೆ ಯ ಭದ್ರತಾ ಕೊಠಡಿಯಲ್ಲಿ ಬಿಗಿ ಭದ್ರತೆ ಇರಿಸಲಾಗಿದೆ. ಮತದಾನ ನಡೆದು ಒಂದು ತಿಂಗಳಾದರೂ ಜಿಲ್ಲೆಯಲ್ಲಿ ಈ ಬಾರಿ ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಚಾರ ಮಾತ್ರ ಇನ್ನೂ ನಡೆಯುತ್ತಲೇ ಇದೆ. ಇನ್ನೊಂದೆಡೆ ನೇರಾ ನೇರಾ ಸ್ಪರ್ಧೆ ಎದುರಿಸುತ್ತಿರುವ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿಗಳು ಈ ಬಾರಿ ಗೆಲುವು ನಮ್ಮ ಅಭ್ಯರ್ಥಿಗಳದ್ದೇ ಎಂದು ಘಂಟಾಘೋಷವಾಗಿ ಹೇಳುಕೊಳ್ಳುತ್ತಿದ್ದರೂ, ಅಂತಿಮವಾಗಿ ಜಯ ಯಾರದ್ದು ಎಂಬ ಕುತೂಹಲ, ಆತಂಕಕ್ಕೆ ತೆರೆಬೀಳಲು ಜೂ.೪ರ ತನಕ ಕಾಯಬೇಕಿದೆ.
ಈ ಬಾರಿ ಜಿಲ್ಲೆಯಲ್ಲಿ ಮನೆ ಮತದಾನ ಸೇರಿದಂತೆ ಒಟ್ಟು. ಶೇ.78.02 ಮತದಾನ ದಾಖಲಾಗಿದ್ದು ಕೈ-ಕಮಲ ಪಕ್ಷದ ಜಿದ್ದಾಜಿದ್ದಿನ ಹೋರಾಟಕ್ಕೆ ಲೋಕಸಭಾ ಕ್ಷೇತ್ರದ ಕಣ ಸಾಕ್ಷಿಯಾಗಿತ್ತು.