Mangalore: ಹರೀಶ್ ಆಚಾರ್ಯ ಶಿಕ್ಷಕರ ಧ್ವನಿ: ಡಾ. ರಾಜಮೋಹನ ರಾವ್

Mangalore: ಹರೀಶ್ ಆಚಾರ್ಯ ಶಿಕ್ಷಕರ ಧ್ವನಿ: ಡಾ. ರಾಜಮೋಹನ ರಾವ್

ಮಂಗಳೂರು: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಎಸ್.ಆರ್. ಹರೀಶ್ ಆಚಾರ್ಯ ಅವರು ಶಿಕ್ಷಕರ ಧ್ವನಿಯಾಗಿ ಸ್ಪರ್ಧಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಅವರಿಗೆ ಆಳವಾದ ಅರಿವಿದೆ. ಹಾಗೂ ಅಧ್ಯಯನವೂ ಇದೆ. ಹಾಗಾಗಿ ಈ ಚುನಾವಣೆಯಲ್ಲಿ ಶಿಕ್ಷಕ ಸಮುದಾಯ ಸಂಪೂರ್ಣವಾಗಿ ಅವಕನ್ನು ಬೆಂಬಲಿಸಿ ಆಯ್ಕೆ ಮಾಡಬೇಕು ಎಂದು ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ರಾಜಮೋಹನ ರಾವ್ ಮನವಿ ಮಾಡಿದರು.

ಶಿಕ್ಷಕ ಸಮುದಾಯಕ್ಕೆ ಯಾವುದೇ ಸಮಸ್ಯೆಗಳು ಎದುರಾದಾಗ ಸಮರ್ಥವಾಗಿ ಪ್ರತಿನಿಧಿಸಬಲ್ಲವರು ಹರೀಶ್ ಆಚಾರ್ಯ . ವಿದ್ಯಾರ್ಥಿ ದಿನಗಳಿಂದಲೇ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಹೋರಾಟ ಸಂಘಟಿಸುತ್ತಿದ್ದ ಅವರು ಶಿಕ್ಷಕ ಸಮುದಾಯದ ಜೊತೆಯೂ ಉತ್ತಮ ಬಾಂಧವ್ಯ ಹೊಂದಿ ಇಂದು ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಈ ಬಾರಿಯ ನೈಋತ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕರಾವಳಿ ಭಾಗವನ್ನು ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ಕಡೆಗಣಿಸಿವೆ. ಈ ಭಾಗದ ಶಿಕ್ಷಕರನ್ನು ಪ್ರತಿನಿಽಸಲು, ಈ ಭಾಗದ ಶಿಕ್ಷಕರ ಧ್ವನಿಯಾಗಲು ವಿಧಾನ ಪರಿಷತ್ನಲ್ಲಿ ಯಾರೂ ಇಲ್ಲದಂತಾಗಲಿದೆ. ಕರಾವಳಿಯ ಪ್ರಬಲ ಅಭ್ಯರ್ಥಿಯಾಗಿರುವ ಡಾ. ಎಸ್.ಆರ್. ಹರೀಶ್ ಆಚಾರ್ಯ ಅವರನ್ನು ಬೆಂಬಲಿಸಿ ಅವರನ್ನು ಶಿಕ್ಷಕರ ಪ್ರತಿನಿಽಯಾಗಿ ಆಯ್ಕೆ ಮಾಡುವ ಹೊಣೆಗಾರಿಕೆ ಈ ಭಾಗದ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ರವೀಂದ್ರ, ಶ್ರೀಲತಾ, ಭರತ್, ದೀಪಿಕಾ ಸನಿಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article