
Mangalore: ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು-ಪದವಿ ಪ್ರದಾನ
ಮಂಗಳೂರು: ಕೊಡಿಯಾಲ್ ಬೈಲ್ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಸೋಮವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಎಕ್ಸ್‌ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ ಮಾತನಾಡಿ, ವಿದ್ಯಾರ್ಜನೆಯ ಸಲುವಾಗಿ ಅನೇಕ ಭಾವನಾತ್ಮಕವಾದ ಅನುಭವಗಳನ್ನು ಪಡೆದಿದ್ದೀರಿ. ವಿದ್ಯಾರ್ಥಿ ದೆಸೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಶೈಕ್ಷಣಿಕವಾಗಿ ಬೆಳವಣಿಗೆ ಕಾಣುವ ಮೂಲಕ ಭವಿಷ್ಯದ ದಿನಗಳಲ್ಲಿಯೂ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಜೀವನದಲ್ಲಿ ವೃತ್ತಿಪರತೆಯ ಮೂಲಕ ಯಶಸ್ಸನ್ನು ಕಾಣಬೇಕು ಎಂದು ಹೇಳಿದರು.
ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್ ನಾಯಕ್ ಮಾತನಾಡಿ ಪಿಯುಸಿ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಿಹಿಕಹಿಗಳ ಅನುಭವಗಳನ್ನು ಕಾಣುವ ಮೂಲಕ ಮುಂದಿನ ಭವಿಷ್ಯದ ದಿನಗಳು ಉತೃಷ್ಟಮಟ್ಟದಲ್ಲಿರಲಿ ಹಾಗೂ ಸಾಧನೆಯನ್ನು ಮಾಡುವಲ್ಲಿ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ ಎಂದರು.
ಶೈಕ್ಷಣಿಕ ಸಮಿತಿ ಸದಸ್ಯ ವಿನಯ್ ಕುಮಾರ್, ಕೋಚಿಂಗ್ ಹೆಡ್‌ಗಳಾದ ಕರುಣಾಕರ ಬಳ್ಕೂರು, ಪ್ರಮೋದ್ ಕಿಣಿ, ಉಪನ್ಯಾಸಕಿಯರಾದ ರಾಧಿಕಾ ಭಟ್, ವಿಲ್ಮಾ ಥೆರೆಸಾ ಉಪಸ್ಥಿತರಿದ್ಧರು.
ಪ್ರಾಂಶುಪಾಲ ಪ್ರೊ.ರಾಮಚಂದ್ರ ಭಟ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ತಮ್ಮ ಅನುಭವವನ್ನು ಹಂಚಿಕೊಂಡರು. ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ಝೀಟಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.