Mangalore: ವಿಕಸನ-ಉಚಿತ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಸಂಪನ್ನ

Mangalore: ವಿಕಸನ-ಉಚಿತ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಸಂಪನ್ನ


ಮಂಗಳೂರು: ಸಿದ್ಧಾಂತ್ ಫೌಂಡೇಶನ್ ನ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ರಾಜ್ಯ ಮಟ್ಟದ ಹತ್ತು ದಿನಗಳ 'ವಿಕಸನ' ಬೇಸಿಗೆ ಶಿಬಿರವು, ಇತ್ತೀಚಿಗೆ  ಶ್ರೀ ರಾಮಾಶ್ರಮ ಪಿಯು ಕಾಲೇಜಿನಲ್ಲಿಸಂಪನ್ನಗೊಂಡಿತು. ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು ಬಳಿಕ ಶಿಬಿರದ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮವು ಜರುಗಿತು. 

10ನೇ ತರಗತಿಯ ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ  ಶೈಕ್ಷಣಿಕ ಬೆಳವಣಿಗೆಗಳಿಗೆ ಪೂರಕವಾಗುವಂತೆ ನುರಿತ ವಿಶೇಷ ತಜ್ಞರಿಂದ ಚಟುವಟಿಕೆ ಆಧಾರಿತ ಕಲಿಕೆಗಳಾದ ವಿಜ್ಞಾನ, ಗಣಿತ, ವಾಣಿಜ್ಯ ಹಾಗೂ ಪ್ರಯೋಗಶಾಲಾ ಪ್ರಯೋಗದ ಕುರಿತು ಮಾಹಿತಿ ಮತ್ತು ಕೌಶಲ್ಯ ಆಧಾರಿತ ಕಲಿಕೆಗಳಾದ ಹಾಡು, ನಾಟಕ, ಚಿತ್ರಕಲೆ, ಕರಕುಶಲ ತರಬೇತಿ, ಮಾತುಗಾರಿಕೆ, ನಿರೂಪಣೆ, ಯೋಗ, ಪ್ರಥಮ ಚಿಕಿತ್ಸೆ ವಿಷಯಗಳ ಕುರಿತು ತರಬೇತಿ ನೀಡಲಾಗಿತ್ತು. ಜೊತೆಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕಾಗಿ ಸಮುದ್ರ ತೀರ ಭೇಟಿ, ಚಾರಣದಂತಹ  ಚಟುವಟಿಕೆಗಳನ್ನು ಕೂಡ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಶಿಬಿರದ ಸಂಪೂರ್ಣ ಉಸ್ತುವಾರಿಯನ್ನು ಪ್ರೊ. ಯಶಸ್ವಿನಿ ಯಶಪಾಲ್  ವಹಿಸಿದ್ದರು. ರಾಜ್ಯದ  ವಿವಿಧ ಭಾಗಗಳಿಂದ  ಇಪ್ಪತ್ತೈದಕ್ಕೂ ಹೆಚ್ಚಿನ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ್ ಕಾಯರ್ಕಟ್ಟೆ,  ತ್ರಿಶಾ ಕಾಲೇಜಿನ ಪ್ರಾಂಶುಪಾಲ ಮಂಜುನಾಥ್ ಕಾಮತ್, ಶಿಬಿರ ನಿರ್ದೇಶಕಿ ಯಶಸ್ವಿನಿ ಯಶಪಾಲ್  ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article