.jpg)
Mangalore: ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ: ಡಾ. ಜಯಕರ ಭಂಡಾರಿ ಎಂ.
ಮಂಗಳೂರು: ಸೋಲು ಗೆಲುವು ಏನೇ ಆದರೂ ಕ್ರೀಡಾ ಸ್ಫೂರ್ತಿಯಿಂದ ತಂಡಗಳು ಭಾಗವಹಿಸಲು ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಕರೆ ನೀಡಿದರು.
ಮೇ.7 ರಂದು ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿಪಿಎಲ್ ಅಂಡರ್ ಆರ್ಮ್ ಪ್ರೀಮಿಯರ್ ಲೀಗ್ ಸೀಸನ್-4 ಕ್ರಿಕೆಟ್ ಲೀಗ್ ಪಂದ್ಯಾಟಕ್ಕೆ ಎಕ್ಕೂರು ಮೈದಾನದಲ್ಲಿ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಬಳಿಕ ಪ್ರಾಂಶುಪಾಲರಿಗೆ ತಂಡಗಳ ಪರಿಚಯವನ್ನು ಮಾಡಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಶುಭಾ ಕೆ.ಹೆಚ್., ಡಾ. ಅಪರ್ಣ ಆಳ್ವ ಎನ್. ಭಾಗವಹಿಸುವ ತಂಡಗಳಿಗೆ ಶುಭ ಹಾರೈಸಿದರು.
ಈ ಕ್ರೀಡಾಕೂಟದಲ್ಲಿ 8 ತಂಡಗಳು ಭಾಗವಹಿಸಿದ್ದು, ತಂಡದ ಮಾಲಿಕರುಗಳಾದ ಕವನ್, ಕೌಶಿಕ್, ಮನೀಷ್, ಹರ್ಷರಾಜ್,ಮಿಥೇಶ್, ಸುನೇಶ್, ಪುನೀತ್, ರಾಹುಲ್ ಅವರು ಶುಭಹಾರೈಸಿದರು.
ಜಿಪಿಎಲ್ ಸೀಸನ್-4ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಯೋಜರಾದ ಅಮೃತ, ಅಖಿಲೇಶ್, ನಿಹಾಲ್, ಸುಶಾಂತ್ ,ಮಿತೇಶ್, ನಿಕೇಶ್, ಲಾವಿಶ್, ಸನತ್, ಕಿಶನ್, ಬ್ರಿಜೇಶ್, ಕವನ್, ಗೌತಮ್, ಮನ್ವಿತ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹರ್ಷಿತ ಮತ್ತು ಕಾವ್ಯ ಪ್ರಾರ್ಥಿಸಿದರು. ಕ್ರೀಡಾ ಕಾರ್ಯದರ್ಶಿ ಜ್ಞಾನೇಶ್ ವಂದಿಸಿದರು.