
Moodubidire: ದೈಹಿಕ ಶಿಕ್ಷಣ ವಿಶ್ರಾಂತ ಶಿಕ್ಷಕ ಕೃಷ್ಣರಾಜ ಶೆಟ್ಟಿ ನಿಧನ
Friday, May 31, 2024
ಮೂಡುಬಿದಿರೆ: ಇಲ್ಲಿನ ಜೈನ ಪ್ರೌಢ ಶಾಲೆಯ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣರಾಜ ಶೆಟ್ಟಿ (62) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು. ಒಟ್ಟು 31 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅವರು ಜೈನ್ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಸಿದ್ದರು.
ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಿತ ಹಲವೆಡೆ ಅವರು ಗೌರವಾದರಗಳಿಗೆ ಪಾತ್ರರಾಗಿದ್ದರು.
ಕೆಲವು ದಿನಗಳ ಹಿಂದೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ಪತ್ನಿ. ಶಿಕ್ಷಕಿ, ಕ್ಲಸ್ಟರ್ ಸಿಆರ್.ಪಿ ನಿರ್ಮಲಾ , ಪುತ್ರಿ ವೈದ್ಯೆ ಅನಘಾ ಅಳಿಯ ಡಾ. ಪುನೀತ್ ಅವರನ್ನು ಅಗಲಿದ್ದಾರೆ.