
Moodubidire: ಶಿರ್ತಾಡಿ-ಬೈಕ್ ನಲ್ಲಿ ಬಂದ ಅಪರಿಚಿತರಿಂದ ಐದು ಲಕ್ಷ ರೂ.ಕಳ್ಳತನ
Friday, May 31, 2024
ಮೂಡುಬಿದಿರೆ: ಬೈಕ್ ನಲ್ಲಿ ಬಂದ ಅಪರಿಚರಿಬ್ಬರು ಶಿರ್ತಾಡಿಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ 4,95,000 ರೂ. ನಗದನ್ನು ಕದ್ದೊಯ್ದ ಘಟನೆ ಶುಕ್ರವಾರ ಸಂಜೆ ಶಿರ್ತಾಡಿಯಲ್ಲಿ ನಡೆದಿದೆ.
ದೀಕ್ಷಿತ್ ಎಂಬವರು ಶಿರ್ತಾಡಿ ಬ್ಯಾಂಕ್ ನಿಂದ ಐದು ಲಕ್ಷ ರೂ.ಡ್ರಾ ಮಾಡಿಕೊಂಡು ಅದರಿಂದ ಐದು ಸಾವಿರ ರೂ.ತೆಗೆದು ಶಿರ್ತಾಡಿಯ ಜಯಶ್ರೀ ಹೊಟೇಲ್ ಗೆ ಹೋಗಿದ್ದರು.
ಉಳಿದ 4,95,000 ನ್ನು ಕಾರಿನಲ್ಲಿಟ್ಟಿದ್ದರು.ಇದೇ ಸಂದರ್ಭದಲ್ಲಿ ಅಪರಿಚಿತರಿಬ್ಬರು ಬೈಕ್ ನಲ್ಲಿ ಬಂದು ಕಾರಿನೊಳಗಿದ್ದ 4,95,000 ನ್ನು ಕದ್ದೊಯ್ದಿದ್ದಾರೆ. ಕಳ್ಳರು ಹಣ ಕದ್ದೊಯ್ಯುವ ದೃಶ್ಯಗಳು ಸಿಸಿ ಕೆಮರಾಗಳಲ್ಲಿ ದಾಖಲಾಗಿದೆ. ದೀಕ್ಷಿತ್ ಅವರು ಹಣ ಡ್ರಾ ಮಾಡುವುದನ್ನು ಗಮನಿಸಿದವರೇ ಈ ಕೃತ್ಯವೆಸಗಿರಬಹುದೆಂದು ಅಂದಾಜಿಸಲಾಗಿದೆ.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಪಂಡಿತ್ ನೇತೃತ್ವದ ಪೊಲೀಸರ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದು ಸಿಸಿ ಕೆಮರಾ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.