Siddapura: ಟೇಂಡರ್ ಆಗದೇ ಅವ್ಯವಹಾರ: ಪಿಡಿಒ ಸೇರಿ 15 ಮಂದಿಯ ಮೇಲೆ ದೂರು
ಸಿದ್ದಾಪುರ: ಹದಗೆಟ್ಟಿರುವ ವ್ಯವಸ್ಥೆಯ ನಡುವೆ ಶೌಚಾಲಯ ಟೆಂಡರ್ ಇಲ್ಲದೇ ಕೆಲವು ಡೀಲ್ ನಡೆಯುತ್ತಿದ್ದು, ಇದರ ವಿರುದ್ಧ ಪಿಡಿಒ ಸೇರಿ 15 ಮಂದಿ ಪಂಚಾಯತ್ ಸದಸ್ಯರ ವಿರುದ್ಧ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ರಾಜೀವ್ ಶೆಟ್ಟಿ ಅವರ ಪುತ್ರ ಸುದರ್ಶನ್ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಇತ್ತೀಚಿಗೆ ಸರಕಾರ ಅಧೀನದ ಸಂಸ್ಥೆಗಳು ಖಾಸಗೀಕರಣವಾಗುತ್ತಿರುವ ಬೆನ್ನಲ್ಲೇ ಸಿದ್ದಾಪುರ ಗ್ರಾಮ ಪಂಚಾಯಿತಿನಲ್ಲಿ ಶೌಚಾಲಯವನ್ನೇ ಖಾಸಗಿ ವ್ಯಕ್ತಿಗೆ ನಿಯಮಗಳನ್ನು ಗಾಳಿಗೆ ತೂರಿ ಮಾರಿಕೊಂಡಂತೆ ತೋರುತ್ತಿದೆ.
ಏನಿದು ಪ್ರಕರಣ:
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮಪಂಚಾಯತ್ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯವನ್ನು ಯಾವುದೇ ರೀತಿಯ ಸಾರ್ವಜನಿಕ ಪ್ರಕಟನೆ, ಏಲಂ ಮಾಡದೆ, ಪತ್ರಿಕಾ ಜಾಹೀರಾತು ನೀಡದೆ, ಗ್ರಾಮ ಪಂಚಾಯತ್ ಸಿದ್ದಾಪುರದ ಪಿಡಿಒ ಮತ್ತು 15 ಮಂದಿ ಸದಸ್ಯರು ತಮಗೆ ಇಷ್ಟ ಬಂದವರಿಗೆ ನೀಡಿ ಸರಕಾರದ ಬೊಕಸಕ್ಕೆ ನಷ್ಟ ಉಂಟು ಮಾಡಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮಪಂಚಾಯತ್ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಶೌಚಾಲಯವನ್ನು ಯಾವುದೇ ಸಾರ್ವಜನಿಕ ಪ್ರಕಟಣೆ ಏಲಂ ಮಾಡದೆ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದು ಸರಕಾರದ ಹಾಗೂ ಸಾರ್ವಜನಿಕ ಆಸ್ತಿಯನ್ನು ದುರ್ಗಾ ಪೌಂಡೇಷನ್ ಚೆರ್‌ಮೆನ್ ಸಂತೋಷ ಕುಮಾರ ಇವರು ನೀಡಿರುವ ಒಂದು ಅರ್ಜಿಗೆ ಸರಕಾರದ ಆಸ್ತಿಯನ್ನು ಐದು ವರ್ಷದ ಅವಧಿಯವರೆಗೆ ಒಪ್ಪಂದ ಕರಾರು ಮತ್ತಿತರ ಷರತ್ತುಗಳನ್ನು ಅಳವಡಿಸಿ ನಿಯಾಮಾನುಸಾರ ಒಪ್ಪಂದ ಮಾಡಿಕೊಂಡಿರುತ್ತೇವೆ ಎಂದು ಸಾಮಾನ್ಯ ಸಭೆಯ ನಿರ್ಣಯದಲ್ಲಿ ಸರ್ವಾನುಮತದಿಂದ ನಿರ್ಣಯಿಸಿರುತ್ತೇವೆ ಎಂದು ಸಿದ್ದಾಪುರ ಗ್ರಾಮಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಗಿರುವ ನಾಗೇಂದ್ರ ಜೆ. ಅವರು ಗ್ರಾಮಪಂಚಾಯತ್‌ನ ನಿರ್ಣಯ ಪುಸ್ತಕದಲ್ಲಿ ನಿರ್ಣಯ ನಂಬ್ರ 15(1)/26.02.2024 ರಂತೆ ಗ್ರಾಮಪಂಚಾಯತ್ ನಿರ್ಣಯ ಮಾಡಿರುತ್ತಾರೆ. ಸಿದ್ದಾಪುರ ಗ್ರಾಮಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಅಧ್ಯಕ್ಷರು ಹಾಗೂ ನಿರ್ಣಯಕ್ಕೆ ಸಹಿ ಹಾಕಿದ ಸರ್ವ ಸದಸ್ಯರು ಕೂಡ ನಿರ್ಣಯದಲ್ಲಿ ಸಹಿ ಮಾಡಿದ್ದು ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ.
ಇದರಲ್ಲಿ ಸಿದ್ದಾಪುರ ಗ್ರಾಮಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಜೆ. ಮತ್ತು ಅಧ್ಯಕ್ಷೆ ಶ್ರೀಲತಾ ಶೆಟ್ಟಿ ಹಾಗೂ ನಿರ್ಣಯಕ್ಕೆ ಸಹಿ ಹಾಕಿದ ಸದಸ್ಯರಾದ ಸಂತೋಷ ಪೂಜಾರಿ, ಭೋಜರಾಜ ಶೆಟ್ಟಿ, ಸವಿತಾ, ಪ್ರಮೀಳಾ ನಾಯ್ಕ, ಭಾಸ್ಕರ ಶೆಟ್ಟಿ, ಮಂಜುನಾಥ ಕುಲಾಲ, ಶೃಂಗೇರಿ, ಶ್ಯಾಮಲ ಶೆಡ್ತಿ, ಪ್ರದೀಪ ಕುಮಾರ ಹೆಗ್ಡೆ, ಶೇಖರ ಕುಲಾಲ, ಗೋಪಾಲ ಕಾಂಚನ್, ಚಂದ್ರಾವತಿ ಶೆಡ್ತಿ, ಮಾಲತಿ ಶೆಡ್ತಿ, ಮತ್ತು ಶೋಭಾ ಇವರು ನಿರ್ಣಯದಲ್ಲಿ ಒಪ್ಪಿಕೊಂಡು ಸಹಿ ಹಾಕಿ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ.
ಅಲ್ಲದೇ ದುಬಾರಿ ದರವನ್ನು ಸಾರ್ವಜನಿಕರಿಂದ ಮೂತ್ರ ವಿಸರ್ಜನಗೆ 5 ರೂ. ಹಾಗೂ ಮಲ ವಿಸರ್ಜನಗೆ 10 ರೂ.ಯಂತೆ ಅಧಿಕ ದರವನ್ನು ಪಡೆಯುವಂತೆ ದುರ್ಗಾ ಪೌಂಡೇಷನ್ ಅವರಿಗೆ ನಿರ್ಣಯದಲ್ಲಿ ನಮೂದಿಸಿ ಅದರಂತೆ ಶೌಚಾಲಯದ ಗೋಡೆಯ ಮೇಲೆ ನಾಮಫಲಕವನ್ನು ಗ್ರಾಮ ಪಂಚಾಯತ್ ಸಿದ್ದಾಪುರ ಶುಲ್ಕ ಪಾವತಿಸಿ ಉಪಯೋಗಿಸಿ ಸಾರ್ವಜನಿಕ ಶೌಚಾಲಯ (Pay and Use Public Toilet) ಮೂತ್ರ ವಿಸರ್ಜನಗೆ 5 ರೂ. ಹಾಗೂ ಮಲ ವಿಸರ್ಜನಗೆ 10 ರೂ. ಎಂದು ಹಾಕಿರುತ್ತಾರೆ.
ಸರಕಾರಿ ನಿಯಮ ಮತ್ತು ಕಾನೂನಿನಲ್ಲಿ ಯಾವುದೇ ಸರಕಾರಿ ಆಸ್ತಿ ಪಾಸ್ತಿಯನ್ನು ಸಾರ್ವಜನಿಕರಿಗಾಗಿ ಪ್ರಕಟಣೆ ನೀಡಿ, ಪತ್ರಿಕಾ ಜಾಹಿರಾತು ನೀಡಿ ಏಲಂ ಮಾಡಬೇಕೆನ್ನುವ ಅರಿವು ಇವರುಗಳಿಗೆ ಇದ್ದರೂ ಕೂಡಾ ನಿಯಮವನ್ನು ಹಾಗೂ ಕಾನೂನನ್ನು ಗಾಳಿಗೆ ತೂರಿ ಕರ್ತವ್ಯ ಲೋಪ ಹಾಗೂ ದುರನಡತೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ. ಆದ್ದರಿಂದ ತಾವು ಇದರ ಬಗ್ಗೆ ತನಿಖೆ ಮಾಡಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮಕ್ಕೆ ಸಾಮಾಜಿಕ ಹೋರಾಟಗಾರರು ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.



