Subramanya: ರಜೆ ಹಿನ್ನಲೆಯಲ್ಲಿ-ಕುಕ್ಕೆಗೆ ಹರಿದು ಬಂದ ಭಕ್ತ ಸಾಗರ

Subramanya: ರಜೆ ಹಿನ್ನಲೆಯಲ್ಲಿ-ಕುಕ್ಕೆಗೆ ಹರಿದು ಬಂದ ಭಕ್ತ ಸಾಗರ


ಸುಬ್ರಹ್ಮಣ್ಯ: ಎರಡು ದಿನಗಳ ಸರಣಿ ರಜೆ ಹಾಗೂ ಬೇಸಿಗೆ ರಜೆ ಕೊನೆಗೊಳ್ಳುತ್ತಿರುವ ಹಿನ್ನಲೆಯಲ್ಲಿ ಯಾತ್ರಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾರೀ ಸಂಖ್ಯೆಯ ಭಕ್ತರ ಆಗಮನವಾಗಿದೆ.

ಶನಿವಾರ ಹಾಗೂ ರವಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು, ಪ್ರಸಾದ ಸ್ವೀಕರಿದರು. ಶನಿವಾರ ಹಾಗೂ ರವಿವಾರ ಸರಕಾರಿ ರಜೆ ಇದ್ದುದರಿಂದ ಹಾಗೂ ಬೇಸಗೆ ರಜೆ ಮುಗಿದು ಶಾಲಾರಂಭಕ್ಕೆ ಕೆಲವೇ ದಿನಗಳು ಇದ್ದು ಯಾತ್ರಿಕರು ಅಧಿಕ ಸಂಖ್ಯೆಯಲ್ಲಿ ಯಾತ್ರಾ ಕ್ಷೇತ್ರಗಳಿಗೆ ಭೇಟಿಯ ನೀಡುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ, ಸುಬ್ರಹ್ಮಣ್ಯ ಪೇಟೆ, ದೇವಸ್ಥಾನದ ಹೊರಾಂಗಣ ಭಕ್ತರ ದಟ್ಟಣೆಯಿಂದ ಕೂಡಿದ್ದು, ದೇವಸ್ಥಾನದ ವತಿಯಿಂದ ಪೂರಕ ವ್ಯವಸ್ಥೆ ಕಲ್ಪಿಸಲಾಗಿತ್ತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article