
Bantwal: ಹೆಲ್ಮೆಟ್ ಧರಿಸದೆ ಸ್ಕೂಟರಲ್ಲಿ ಸಂಚರಿಸಿ ರಸ್ತೆ ವೀಕ್ಷಿಸಿದ ಜಿಲ್ಲಾಧಿಕಾರಿ
Thursday, June 13, 2024
ಬಂಟ್ವಾಳ: ಜಿಲ್ಲಾಧಿಕಾರಿಗಳು ಬಂಟ್ವಾಳ ತಾಲೂಕು ಕಚೇರಿಯ ಕಂದಾಯಾಧಿಕಾರಿ ಜನಾರ್ದನ ಅವರ ದ್ವಿಚಕ್ರ ವಾಹನದಲ್ಲಿ ಸಹಸವಾರರಾಗಿ ಸಂಚರಿಸಿ ಹೆದ್ದಾರಿ ಸ್ಥಿತಿಗತಿ ಖುದ್ದು ವೀಕ್ಷಿಸಿದರು.
ಈ ಸಂದರ್ಭ ಇಬ್ಬರು ಸವಾರರು ಕೂಡ ಹೆಲ್ಮೆಟ್ ಧರಿಸದಿರುವುದು ಮತ್ತು ಇದಕ್ಕೆ ಸ್ಥಳದಲ್ಲಿದ್ದ ಬಂಟ್ವಾಳ ಸಂಚಾರಿ ಠಾಣೆಯ ಎಸ್‌ಐ ಅವರೇ ಸಾಕ್ಷಿಯಾಗಿದ್ದದು ಸ್ಥಳೀಯವಾಗಿ ಚಾಲಕ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದೆಯಲ್ಲದೆ, ಸಾಮಾಜಿಕ ಜಾಲತಾಣದಲ್ಲು ಸಖತ್ ವೈರಲ್ ಕೂಡ ಆಗಿದೆ.
ಕಲ್ಲಡ್ಕ ಪೇಟೆಯಲ್ಲಿ ಪ್ಲೈ ಓವರ್ ಕಾಮಗಾರಿ ಭರದಿಂದ ಸಾಗುತ್ತಿದೆಯಾದರೂ ವಾಹನ ಸಂಚಾರಕ್ಕೆ ಅನುಕೂಲವಾದ ಸರ್ವೀಸ್ ರಸ್ತೆ ನಿರ್ಮಿಸದೆ ವಾಹನ ಸವಾರರು ಕೆಸರು ಮಿಶ್ರಿತ ಹೊಂಡ ಗುಡಿಯ ರಸ್ತೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.ಪಾದಚಾರಿಗಳು ಕೂಡ ಅಸಹನೀಯ ಸ್ಥಿತಿಯಲ್ಲಿ ಸಂಚರಿಸುತ್ತಿದ್ದಾರೆ.
ಕಲ್ಲಡ್ಕ ಪೇಟೆಯ ಈ ಅವ್ಯವಸ್ಥೆಯ ಬಗ್ಗೆ ಮಾಧ್ಯಮಗಳು ನಿರಂತರವಾಗಿ ಸಚಿತ್ರ ವರದಿಯ ಮೂಲಕ ಬೆಳಕುಚೆಲ್ಲುತ್ತಿದ್ದರೂ, ಬುಧವಾರ ಜಿಲ್ಲಾಧಿಕಾರಿಯವರ ಭೇಟಿಯ ಬಗ್ಗೆ ತಾಲೂಕಾಡಳಿತ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡದೆ ಗೌಪ್ಯವಾಗಿರಿಸಲಾಗಿತ್ತು.