
Bantwal: ದೈವಸ್ಥಾನದ ಕಚೇರಿ ಬಾಗಿಲು ಮುರಿದು ಕಾಣಿಕೆ ಡಬ್ಬಿಯಿಂದ ಹಣ ಕಳವು
Monday, June 17, 2024
ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಕಲ್ಲುರ್ಟಿ ದೈವಸ್ಥಾನದ ಕಚೇರಿಯ ಬೀಗ ಮುರಿದು ಒಳಪ್ರವೇಶಿದ ಕಳ್ಳರು ಕಾಣಿಕೆ ಹುಂಡಿಯನ್ನು ಒಡೆದು ಹಣವನ್ನು ದೋಚಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ ದೈವಸ್ಥಾನದ ಅರ್ಚಕರು ಪೂಜೆ ಮುಗಿಸಿ ದೈವಸ್ಥಾನ ಹಾಗೂ ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು.ಭಾನುವಾರ ಬೆಳಿಗ್ಗೆ ಪೂಜೆಗಾಗಿ ಬಂದಾಗ ಸಂಬಂಧಪಟ್ಟ ಪ್ರಸಾದದ ಮತ್ತು ದೇಸ್ಥಾನದ ಕಚೇರಿಯ ಬೀಗವನ್ನು ಮುರಿದಿರುವುದು ಬೆಳಕಿಗೆ ಬಂದಿದೆ.
ಒಳಗೆ ನೋಡಿದಾಗ ಕಾಣಿಕೆಡಬ್ಬಿಯನ್ನು ಒಡೆದು ಅದರಲ್ಲಿದ್ದು ನಗದನ್ನು ದೋಚಲಾಗಿದೆ.ಸುಮಾರು 30 ಸಾ.ರೂ. ಕಳವಾಗಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಡಾ. ಪಿ ವಿಶ್ವನಾಥ ನಾಯಕ್ ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.