Beltangadi: ಅಪಪ್ರಚಾರದ ನಡುವೆ ಸುಭದ್ರ ಸರಕಾರ: ಪ್ರತಾಪ್‌ಸಿಂಹ ನಾಯಕ್
Wednesday, June 5, 2024
ಬೆಳ್ತಂಗಡಿ: ವಿಪಕ್ಷಗಳ ಅಪಪ್ರಚಾರ, ಷಡ್ಯಂತ್ರಗಳ ನಡುವೆಯೂ ಎನ್.ಡಿ.ಎ. ಲೋಕಸಭೆಯ ಮ್ಯಾಜಿಕ್ ಸಂಖ್ಯೆಯನ್ನು ದಾಟಿದೆ. ಬಿಜೆಪಿಯೊಂದಿಗಿನ ಅದರ ಮಿತ್ರಪಕ್ಷಗಳು ಸುಭದ್ರ ಸರಕಾರದ ರಚನೆಗೆ ಸಹಯೋಗ ನೀಡಲಿದ್ದು ಮುಂದಿನ ಐದು ವರ್ಷಗಳವರೆಗೆ ಮತ್ತೆ ಕಾಂಗ್ರೇಸೇತರ ಸರಕಾರ ಅಧಿಕಾರಕ್ಕೆ ಬರಲಿದೆ.
ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಕ್ಯಾ. ಬೃಜೇಶ್ ಚೌಟ ಅವರು 1.48 ಲಕ್ಷ ಮತಗಳ ಅಂತರದಿಂದ ವಿಜಯಗಳಿಸಿರುವುದಕ್ಕೆ ಮತದಾರರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.