Byndoor: ಲೋಕಾಯುಕ್ತ ಬಲೆಗೆ ಅರಣ್ಯಾಧಿಕಾರಿ

Byndoor: ಲೋಕಾಯುಕ್ತ ಬಲೆಗೆ ಅರಣ್ಯಾಧಿಕಾರಿ

ಬೈಂದೂರು: ಬೈಂದೂರು ವಲಯ ಉಪವಲಯ ಅರಣ್ಯಾಧಿಕಾರಿ ಬಂಗಾರಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾದರೆ, ಅರಣ್ಯ ವೀಕ್ಷಕ ವಿನಾಯಕ ತಪ್ಪಿಸಿಕೊಂಡಾತ.

ಬೈಂದೂರು ತಾಲೂಕಿನ ಶಿರೂರು ನಿವಾಸಿ ಮಹಮ್ಮದ್ ಅನ್ವರ್ ಹಸನ್ ಎಂಬುವರ ಪಟ್ಟಾ ಸ್ಥಳದಲ್ಲಿದ್ದ ಹಲಸಿನ ಮರ ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಅನುಮತಿ ನೀಡುವ ಬಗ್ಗೆ ಇಲಾಖೆಗೆ ಅರ್ಜಿ ನೀಡಿದ್ದು, ಪರವಾನಿಗೆ ನೀಡಲು ನಾಲ್ಕು ಸಾವಿರ ರೂ.ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಬಗ್ಗೆ ಮಹಮ್ಮದ್ ಅನ್ವರ್ ಹಸನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಣದ ಸಮೇತ ಆರೋಪಿ ಬಂಗಾರಪ್ಪನನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಂಗಳೂರು ವಿಭಾಗ ಲೋಕಾಯುಕ್ತ ಪೊಲೀಸ್ ಅಧಿಕ್ಷಕ ನಟರಾಜ್ ಎಂ.ಎ.ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ಹಾಗೂ ಕರ್ನಾಟಕ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ತಂಡದಲ್ಲಿ ಸಿಬ್ಬಂದಿ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಮಲ್ಲಿಕಾ, ಪುಷ್ಪಾವತಿ, ಸತೀಶ್ ಹಂದಾಡಿ, ರವೀಂದ್ರ ಗಾಣಿಗ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ ದೇವಾಡಿಗ, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟಿ, ಸೂರಜ್ ಹಾಗೂ ಸುಧೀರ್ ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article